ನಿಂಬೆ ರಸಕ್ಕೆ ಒಂದು ಸ್ಪೂನ್ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ!
ಕೂದಲನ್ನು ಕಪ್ಪಾಗಿಸಲೆಂದು ಪ್ರತಿ ತಿಂಗಳು ಬಣ್ಣ ಬಳಿಯುವುದು ಕೆಲವರಿಗೆ ಅಸಾಧ್ಯ, ಇನ್ನೂ ಕೆಲವರಿಗೆ ಕೃತಕ ಬಣ್ಣ ಬಳಿಯಲೆಂದು ಮಾರುಕಟ್ಟೆಯಲ್ಲಿರುವ ದುಬಾರಿ ಬಣ್ಣಗಳು ದುಂದುವೆಚ್ಚ ಎಂದೆನಿಸಬಹುದು. ಜೊತೆ ಕೂದಲಿಗೆ ಅದರಿಂದ ಅಡ್ಡಪರಿಣಾಮಗಳೇ ಹೆಚ್ಚು.
ತೆಂಗಿನ ಎಣ್ಣೆಯ ಬಳಕೆಯು ಬೇರುಗಳಿಂದ ಕಪ್ಪು ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಅದು ಸಹ ನೈಸರ್ಗಿಕ ರೀತಿಯಲ್ಲಿ. ಇದರಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲದೆ ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ.
ಬಿಳಿ ಕೂದಲು ಕಪ್ಪಾಗಲು ತೆಂಗಿನೆಣ್ಣೆ ಹಚ್ಚಬಹುದು. ಇದು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಮೆಲನಿನ್ ಕೂದಲಿಗೆ ಬಣ್ಣವನ್ನು ನೀಡುತ್ತದೆ. ಜೊತೆಗೆ ಕೂದಲನ್ನು ಸ್ವತಂತ್ರ ರಾಡಿಕಲ್ ಮತ್ತು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುತ್ತದೆ.
ಕೂದಲು ಕಪ್ಪಾಗಲು ತೆಂಗಿನೆಣ್ಣೆಯಲ್ಲಿ ನಿಂಬೆರಸ ಬೆರೆಸಿ ಹಚ್ಚಿಕೊಳ್ಳಿ. ಈ ಮಿಶ್ರಣವು ಬಿಳಿ ಕೂದಲು ಕಪ್ಪಾಗಿಸಲು ಸಹಾಯ ಮಾಡುತ್ತದೆ. 3 ಚಮಚ ತೆಂಗಿನ ಎಣ್ಣೆ ಮತ್ತು ಸಮಾನ ಪ್ರಮಾಣದ ನಿಂಬೆ ರಸವನ್ನು ಒಟ್ಟಿಗೆ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ನೆತ್ತಿಯಿಂದ ಕೂದಲಿನ ಬೇರುಗಳವರೆಗೆ ಹಚ್ಚಿ, ಶವರ್ ಕ್ಯಾಪ್ನಿಂದ ಕವರ್ ಮಾಡಿಕೊಳ್ಳಿ.
ಸುಮಾರು 45-50 ನಿಮಿಷಗಳ ಕಾಲ ಹಾಗೆಯೇ ಬಿಳಿ. ನಂತರ ಕೂದಲನ್ನು ತೊಳೆಯಿರಿ. ಈ ಮಿಶ್ರಣವನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.