ಒಂದು ಲೋಟ ಬಿಸಿನೀರಿಗೆ ಈ ಪುಡಿ ಬೆರೆಸಿ ಕುಡಿಯಿರಿ: 5 ದಿನದಲ್ಲಿ ಸೊಂಟದ ಬೊಜ್ಜು ಕರಗಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿ
ಶುಂಠಿಯು ಉಷ್ಣ ಸ್ವಭಾವವನ್ನು ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಮತ್ತು ದೇಹದಲ್ಲಿ ಶಾಖವನ್ನು ಉಂಟುಮಾಡಬಹುದು. ಆದರೆ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಬಹಳಷ್ಟು ಪ್ರಯೋಜನ ಪಡೆಯಬಹುದು.
ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಶುಂಠಿ ಸಹಾಯಕ. ಆಯುರ್ವೇದದಲ್ಲಿ ಶುಂಠಿಯನ್ನು ಔಷಧವೆಂದು ಪರಿಗಣಿಸಲಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲ, ಔಷಧವಾಗಿಯೂ ಬಳಸಲಾಗುತ್ತದೆ.
ಶುಂಠಿಯನ್ನು ಸರಿಯಾಗಿ ಸೇವಿಸಿದರೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಶುಂಠಿಯ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ತೂಕವನ್ನು ಕಡಿಮೆ ಮಾಡಲು, ಹೊಟ್ಟೆ ಉಬ್ಬುವಿಕೆಲು, ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ.
ಶುಂಠಿ ಚಹಾವನ್ನು ತಯಾರಿಸಬಹುದು ಅಥವಾ ಆಹಾರದಲ್ಲಿ ಬಳಸಬಹುದು. ಇಲ್ಲವೇ ಇದರ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯಬಹುದು. ಹೀಗೆ ಸೇವಿಸಿದರೆ ದೇಹದ ತೂಕ ಸುಲಭವಾಗಿ ಕರಗುತ್ತದೆ. ಕೇವಲ ನಾಲ್ಕೈದು ದಿನಗಳಲ್ಲಿ ಬದಲಾವಣೆ ಗೋಚರಿಸುತ್ತದೆ.
ಶುಂಠಿ ಡಿಟಾಕ್ಸ್ ಪಾನೀಯ ತಯಾರಿಸಲು, ಒಂದು ಚಮಚ ತುರಿದ ಶುಂಠಿ ಅಥವಾ ಒಣಶುಂಠಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಮೂರು ಚಮಚ ನಿಂಬೆ ರಸವನ್ನು ಸೇರಿಸಿ. ಈಗ ಅದನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಕುಡಿಯಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.