ಮೊಸರಿನ ಜೊತೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ ಬಿಳಿ ಕೂದಲು ಮರಳಿ ಕಪ್ಪಾಗಿ ಮಾರುದ್ದ ಬೆಳೆದು ರೇಷ್ಮೆಯಂತೆ ಹೊಳೆಯುತ್ತದೆ !
ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಎ, ಬಿ 5 ಮತ್ತು ಡಿ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಮೊಸರು ಕೂದಲಿಗೆ ಹೊಳಪನ್ನು ನೀಡುವಲ್ಲಿ ಕಂಡೀಷನರ್‌ನಂತೆ ಕೆಲಸ ಮಾಡುವುದಲ್ಲದೆ, ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಮೊಸರು ಮತ್ತು ಮೆಂತ್ಯ ಹೇರ್ ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ನಿಲ್ಲಿಸಬಹುದು. ಇದು ಬಿಳಿ ಕೂದಲನ್ನು ಸಹ ತಡೆಯುತ್ತದೆ. ಮಂತ್ಯ ಮೊಸರಿನ ಹೇರ್ ಮಾಸ್ಕ್ ನಿಂದ ಬಿಳಿ ಕೂದಲು ಕಪ್ಪಾಗುವುದು.
ಮೆಂತ್ಯ ಬೀಜಗಳು ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತವೆ, ಇದು ಕೂದಲಿನ ಬೆಳವಣಿಗೆಯಲ್ಲಿ ಪರಿಣಾಮಕಾರಿ. ಮೆಂತ್ಯ ಒಣ ಕೂದಲು ಮತ್ತು ತಲೆಹೊಟ್ಟು ನಿವಾರಣೆಯನ್ನು ನೀಡುತ್ತದೆ.
ರಾತ್ರಿ ಒಂದು ಬಟ್ಟಲಿನಲ್ಲಿ 2 ಚಮಚ ಮೆಂತ್ಯ ಬೀಜ ನೆನೆಸಿಡಿ. ಮರುದಿನ ಬೆಳಗ್ಗೆ ಇದನ್ನು ರುಬ್ಬಿ 2 ಚಮಚ ಮೊಸರು ಮಿಶ್ರಣ ಮಾಡಿ. ಕೂದಲಿಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ನೀವು ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಬಳಸಿದರೆ ಬಿಳಿ ಕೂದಲು ಕಪ್ಪಾಗುವುದು.
ಒಂದು ಕಪ್ ಮೊಸರಿನಲ್ಲಿ 3 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ನಂತರ ಮೊಸರಿಗೆ ಸೇರಿಸಿ. ಈ ಹೇರ್ ಮಾಸ್ಕ್ ಅನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯವರೆಗೆ ಬಿಟ್ಟು ತೊಳೆಯಿರಿ.
ತೆಂಗಿನ ಎಣ್ಣೆಯು ನೈಸರ್ಗಿಕ ಲಿಪಿಡ್‌ಗಳನ್ನು ಹೊಂದಿರುತ್ತದೆ. ಕೂದಲಿನ ಬೇರುಗಳನ್ನು ಗಟ್ಟಿಯಾಗಿಸುತ್ತದೆ. ತೆಂಗಿನೆಣ್ಣೆಯೊಂದಿಗೆ ಮೊಸರಿನ ಹೇರ್ ಮಾಸ್ಕ್ ಬಳಸಿದರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ ಕೂದಲು ಉದುರುವಿಕೆಯನ್ನು ತಡೆಯುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.