ಮೊಟ್ಟೆಗೆ ಈ ಕಾಯಿಯ ಪುಡಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು 10 ನಿಮಿಷದಲ್ಲಿ ಬುಡ ಸಮೇತ ಕಪ್ಪಾಗುವುದು !
ಒತ್ತಡದ ಜೀವನ ಶೈಲಿ ಮತ್ತು ಮಾಲಿನ್ಯದಿಂದ ಸರಿಯಾದ ಪೋಷಣೆ ಇಲ್ಲದೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತವೆ.
ಗಿಡಮೂಲಿಕೆಗಳು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತವೆ. ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ನೈಸರ್ಗಿಕ ಮಾರ್ಗಗಳನ್ನು ಬಳಸಬಹುದು.
ಮನೆಯಲ್ಲಿ ನೈಸರ್ಗಿಕ ಹೇರ್ ಡೈ ಮಾಡಲು 1 ಕಪ್ ಗೋರಂಟಿ ಪುಡಿ, 1 ಕಪ್ ಇಂಡಿಗೋ ಪುಡಿ, 1 ಚಮಚ ಹೇರ್ ಕಂಡಿಷನರ್, 1 ಮೊಟ್ಟೆ ಬೇಕು.
ಕೂದಲಿನ ನೈಸರ್ಗಿಕ ಬಣ್ಣವನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ಗೋರಂಟಿ ಪುಡಿ ಮತ್ತು ಇಂಡಿಗೋ ಪುಡಿ ತೆಗೆದುಕೊಳ್ಳಿ. ನಂತರ ಅದಕ್ಕೆ ಹೇರ್ ಕಂಡೀಷನರ್ ಮತ್ತು ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಅಗತ್ಯವಿದ್ದರೆ, ನೀವು ಅದಕ್ಕೆ ನೀರನ್ನು ಕೂಡ ಸೇರಿಸಬಹುದು ಅಥವಾ ಮೊಸರು ಬಳಸಿದರೆ ಉತ್ತಮ. ಇದನ್ನು ಬಿಳಿ ಕೂದಲಿಗೆ ಬೇರುಗಳಿಂದ ತುದಿಯವರೆಗೆ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ. ಬಿಳಿ ಕೂದಲು ಕಡು ಕಪ್ಪಾಗುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.