ಮೊಟ್ಟೆಗೆ ಇದನ್ನು ಬೆರೆಸಿ ಹಚ್ಚಿ: ಬಿಳಿಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತೆ!
ತಲೆ ಬಾಚುವಾಗ ಬಹಳಷ್ಟು ಕೂದಲು ಉದುರುತ್ತದೆಯೇ? ಇದಕ್ಕೆ ಮುಖ್ಯ ಕಾರಣವೆಂದರೆ ಆಹಾರದಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆ. ಆರೋಗ್ಯಕರ ಕೂದಲಿಗೆ ಸಮತೋಲಿತ ಆಹಾರ ಅತ್ಯಗತ್ಯ.
ಆರೋಗ್ಯಕರ ಹೊಳೆಯುವ ಕೂದಲಿಗೆ ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪ್ಯಾಕ್’ಗಳನ್ನು ಪ್ರಯತ್ನಿಸಿ. ವರ್ಷವಿಡೀ ಕೂದಲ ರಕ್ಷಣೆಗೆ ಅವು ಉಪಯುಕ್ತವಾಗಿವೆ. ಮೊಟ್ಟೆಗಳು ಪ್ರೋಟೀನ್’ಗಳಲ್ಲಿ ಸಮೃದ್ಧವಾಗಿವೆ. ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ.
ಮೊಟ್ಟೆಯ ಬಿಳಿಭಾಗ, ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆ ಮತ್ತು ಜೇನುತುಪ್ಪದ ಪ್ಯಾಕ್ ಮಾಡಿ. ಈ ಪೇಸ್ಟ್ ಅನ್ನು ತಲೆ ಮತ್ತು ನೆತ್ತಿಯ ಭಾಗಗಳಿಗೆ ಹಚ್ಚಿ, ಅರ್ಧ ಘಂಟೆಯವರೆಗೆ ಇರಿಸಿ. ನಂತರ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ.
ತಲೆಹೊಟ್ಟು ಸಮಸ್ಯೆ ಇದ್ದರೆ ಅದಕ್ಕೆ ನಿಂಬೆ ರಸವನ್ನು ಕೂಡ ಸೇರಿಸಬಹುದು. ವಾರಕ್ಕೊಮ್ಮೆ ಈ ಟಿಪ್ಸ್ ಫಾಲೋ ಮಾಡಿದರೆ ಕೂದಲು ಬಿಳಿಯಾಗುವುದು, ಕೂದಲು ಉದುರುವಿಕೆ, ತಲೆಹೊಟ್ಟು ಹೀಗೆ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.