ಕಾಫಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ ಕೇವಲ 5 ದಿನದಲ್ಲಿ ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಸುಲಭವಾಗಿ ಕರಗಿಹೋಗುತ್ತೆ!
ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ವ್ಯಾಯಾಮವನ್ನು ಮಾಡುವುದಿಲ್ಲ. ಇವೆಲ್ಲದರ ಬದಲಾಗಿ ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಅಂದಹಾಗೆ ಸೊಂಟ ಮತ್ತು ಹೊಟ್ಟೆ ಭಾಗದಲ್ಲಿ ತುಂಬಿರುವ ಕೊಬ್ಬನ್ನು ಇಳಿಸಲು ನಿಂಬೆ ಕಾಫಿ ತುಂಬಾ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ.
ಕಾಫಿ ಮತ್ತು ನಿಂಬೆ ಎರಡೂ ತೂಕ ನಷ್ಟದಲ್ಲಿ ಪರಿಣಾಮಕಾರಿ. ಕಾಫಿಯು ಕೆಫೀನ್ ಅನ್ನು ಹೊಂದಿದ್ದು, ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಇನ್ನು ಕೇಂದ್ರ ನರಮಂಡಲವನ್ನು ಉತ್ತೇಜಿಸಿ, ಜಾಗರೂಕತೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇನ್ನು ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತವೆ.
ನಿಂಬೆ ಮತ್ತು ಕಾಫಿ ಎರಡೂ ಆರೋಗ್ಯಕರ ಎಂಬುದು ನಿಜ. ಕಾಫಿಗೆ ನಿಂಬೆ ಸೇರಿಸುವುದರಿಂದ ಹಸಿವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೆ, ಚಯಾಪಚಯವು ವೇಗಗೊಳ್ಳುತ್ತದೆ. ಹೀಗಾದಾಗ ತನ್ನಿಂದ ತಾನಾಗೇ ದೇಹದಲ್ಲಿ ಬೊಜ್ಜು ಕರಗುತ್ತದೆ.
ಕಾಫಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಜೊತೆಗೆ ರೋಗಗಳು ಬರುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
ತಲೆನೋವು ಕಡಿಮೆ ಮಾಡಲು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹ ಇದು ಸಹಾಯ ಮಾಡುತ್ತದೆ. ಆದರೆ ಒಂದು ದಿನದಲ್ಲಿ ಒಂದಕ್ಕಿಂತ ಹೆಚ್ಚು ಕಪ್ ಲೆಮನ್ ಕಾಫಿ ಕುಡಿಯಬೇಡಿ. ಇದು ಪ್ರಯೋಜನಕಾರಿ ಎಷ್ಟೋ ಅಷ್ಟೇ ಅಪಾಯವನ್ನುಂಟು ಮಾಡಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)