ಮೆಹಂದಿಯಲ್ಲಿ ಈ ಪದಾರ್ಥಗಳನ್ನು ಬೆರೆಸಿ ಹಚ್ಚಿಡಿದರೆ ನೈಸರ್ಗಿಕವಾಗಿ ಕಡು ಕಪ್ಪಾಗುತ್ತೆ ಬಿಳಿಕೂದಲು
ಪ್ರಸ್ತುತ ಬದಲಾದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ.
ಕೆಲವರು ಬಿಳಿ ಕೂದಲನ್ನು ಕಪ್ಪಾಗಿಸಲು ಮೆಹಂದಿಯನ್ನು ಬಳಸುತ್ತಾರೆ. ಆದರೆ, ಮೆಹಂದಿ ಜೊತೆಗೆ ಕೆಲವು ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಕೂದಲು ಕಡು ಕಪ್ಪಾಗಿ, ಕಾಂತಿಯುತವೂ ಆಗುತ್ತದೆ.
ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳೆಂದರೆ:- * ಹೆನ್ನಾ/ ಮೆಹಂದಿ * ಒಂದು ಲೋಟ ನೀರು * ಒಂದು ಚಮಚ ಕಪ್ಪು ಎಳ್ಳು * ಒಂದು ಚಮಚ ಚಹಾ ಪುಡಿ
ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಮೊದಲು ಒಂದು ಬಾಣಲೆಯಲ್ಲಿ ಒಂದು ಲೋಟ ನೀರು ಹಾಕಿ ಇದರಲ್ಲಿ ಸಮ ಪ್ರಮಾಣದಲ್ಲಿ ಕಪ್ಪೆಳ್ಳು, ಟೀ ಸೊಪ್ಪನ್ನು ಬೆರೆಸಿ ಚೆನ್ನಾಗಿ ಕುದಿಸಿ. ಬಳಿಕ ಇದರಲ್ಲಿ ನಾಲ್ಕೈದು ಸ್ಪೂನ್ ಮೆಹಂದಿಯನ್ನು ಬೆರೆಸಿ. ಬಳಿಕ ರಾತ್ರಿಯಿಡೀ ಅದನ್ನು ಹಾಗೆ ಬಿಡಿ.
ರಾತ್ರಿ ತಯಾರಿಸಿಟ್ಟ ಹೇರ್ ಡೈ ಅನ್ನು ಬೆಳಿಗ್ಗೆ ಕೂದಲಿಗೆ ಹಚ್ಚಿ ಒಂದು ಗಂಟೆ ಒಣಗಲು ಬಿಡಿ.
ಹೇರ್ ಡೈ ಒಣಗಿದ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಬೆಚ್ಚಗಿನ ನೀರಿನಲ್ಲಿ ಹೇರ್ ವಾಶ್ ಮಾಡಿ.
ಈ ರೀತಿಯಾಗಿ ಮೆಹಂದಿಯೊಂದಿಗೆ ಕಪ್ಪೆಳ್ಳು, ಟೀ ಪುಡಿ ಬೆರೆಸಿ ತಯಾರಿಸಿದ ಹೇರ್ ಡೈ ಬಳಸುವುದರಿಂದ ನೈಸರ್ಗಿಕವಾಗಿ ಕೂದಲು ಕಪ್ಪಾಗುತ್ತದೆ. ಮಾತ್ರವಲ್ಲ ಸುಂದರವಾದ ಕಾಂತಿಯುತ ಉದ್ದ ಕಡು ಕಪ್ಪಾದ ಕೂದಲನ್ನು ಹೊಂದಲು ಪ್ರಯೋಜನಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.