ಹಾಲಲ್ಲಿ ಈ ಬೀಜ ಬೆರೆಸಿ ಕುಡಿಯಿರಿ: ಕರಗಿಸಲೂ ಅಸಾಧ್ಯವೆನ್ನುವ ಹೊಟ್ಟೆಯ ಬೊಜ್ಜು ಕೇವಲ 5 ದಿನದಲ್ಲಿ ಸರಾಗವಾಗಿ ಇಳಿಯುತ್ತೆ!
ಆರೋಗ್ಯಕರ ಆಹಾರವು ದೇಹವನ್ನು ಸ್ಲಿಮ್ ಮಾಡಲು ಮಾತ್ರವಲ್ಲದೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತುಪಡಿಸುವ ಕೆಲವು ಆರೋಗ್ಯಕರ ಬೀಜಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ
ಈ ಬೀಜಗಳ ಸೇವನೆಯಿಂದ ದೇಹವು ಉತ್ತಮ ಪ್ರಮಾಣದ ಪ್ರೋಟೀನ್ಗಳು, ವಿಟಮಿನ್ಗಳು ಮತ್ತು ಖನಿಜಗಳನ್ನು ಪಡೆಯುತ್ತದೆ.
ಚಿಯಾ ಬೀಜಗಳು: ಚಿಯಾ ಬೀಜಗಳನ್ನು ಡಯೆಟ್ ಫುಡ್’ನಲ್ಲಿ ಸೇರಿಸಿಕೊಳ್ಳಬಹುದು. ಫೈಬರ್ನಲ್ಲಿ ಸಮೃದ್ಧವಾಗಿದ್ದು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತವೆ. ಈ ಬೀಜಗಳನ್ನು ಜ್ಯೂಸ್ ಮಾಡಿಯೂ ಸೇವಿಸಬಹುದು, ಇಲ್ಲವಾದಲ್ಲಿ ನೀರು ಅಥವಾ ಒಂದು ಲೋಟ ಹಾಲಿನಲ್ಲಿಯೂ ಬೆರೆಸಿ ಕುಡಿದರೆ ಶೀಘ್ರವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜಗಳು: ಸತುವು ಸಮೃದ್ಧವಾಗಿರುವ ಕುಂಬಳಕಾಯಿ ಬೀಜಗಳು ಕೊಬ್ಬನ್ನು ಸುಡುವಲ್ಲಿ ಸಹಕಾರಿ. ಈ ಬೀಜಗಳಲ್ಲಿ ಪ್ರೋಟೀನ್, ಕೊಬ್ಬಿನಾಮ್ಲಗಳು, ತಾಮ್ರ ಮತ್ತು ಸತುವು ಕೂಡ ಇರುತ್ತದೆ. ಇವುಗಳನ್ನು ತಿನ್ನುವುದರಿಂದ ತೂಕ ಕಡಿಮೆಯಾಗುವುದಲ್ಲದೆ ಕೊಲೆಸ್ಟ್ರಾಲ್ ನಿರ್ವಹಣೆಗೂ ಸಹಕಾರಿಯಾಗುತ್ತದೆ.
ಅಗಸೆ ಬೀಜಗಳು: ತೂಕ ನಷ್ಟಕ್ಕೆ, ಫೈಬರ್ ಸೇವನೆಗೆ ಒತ್ತು ನೀಡಲಾಗುತ್ತದೆ. ಅಗಸೆ ಬೀಜಗಳು ಫೈಬರ್ನಲ್ಲಿ ಸಮೃದ್ಧವಾಗಿವೆ. ಈ ಬೀಜಗಳಲ್ಲಿ ಅನೇಕ ಇತರ ಪೋಷಕಾಂಶಗಳು ಕಂಡುಬರುವುದಲ್ಲದೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಬ್ಜಾ ಬೀಜ: ಸಬ್ಜಾ ಬೀಜಗಳನ್ನು ತೂಕ ಇಳಿಸುವ ಆಹಾರದ ಭಾಗವಾಗಿ ಮಾಡಬಹುದು. ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಕಾರಣ ಈ ಬೀಜಗಳನ್ನು ಸೂಪರ್ಫುಡ್ ಎಂದೂ ಕರೆಯುತ್ತಾರೆ. ಸ್ಥೂಲಕಾಯದಿಂದ ಬಳಲುತ್ತಿರುವವರು ಈ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಬೀಜಗಳನ್ನು ಸೇವಿಸುವ ಮೊದಲು, ಅವುಗಳನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ, ಆ ನಂತರ ಸೇವಿಸಿ,
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಹೇಳಿಕೊಳ್ಳುವುದಿಲ್ಲ.