ಒಂದು ಲೋಟ ನೀರಿಗೆ ಈ ಮಸಾಲೆ ಬೆರೆಸಿ ಕುಡಿದರೆ... ಎಷ್ಟೇ ಬೆಳ್ಳಗಾಗಿರುವ ಕೂದಲು ಸಹ ಕಡುಕಪ್ಪಾಗಿ ಮೊಣಕಾಲುದ್ದ ಬೆಳೆಯುತ್ತೆ!

Tue, 12 Nov 2024-6:58 pm,

ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಬಿಳಿಕೂದಲು. ಕೂದಲಿನ ಬಣ್ಣಕ್ಕೆ ಬದಲಾಗಿ, ಕೆಲವು ಆಯುರ್ವೇದ ಗಿಡಮೂಲಿಕೆಗಳೊಂದಿಗೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಬಿಳಿ ಕೂದಲಿನ ಸಮಸ್ಯೆಗೆ ಹಲವು ಕಾರಣಗಳಿವೆ.

ಪೋಷಕಾಂಶಗಳ ಕೊರತೆ, ಅತಿಯಾದ ರಾಸಾಯನಿಕ ಉತ್ಪನ್ನಗಳ ಬಳಕೆ ಮತ್ತು ಸರಿಯಾದ ಆರೈಕೆಯ ಕೊರತೆಯು ಕೂದಲು ಬಿಳಿಬಣ್ಣಕ್ಕೆ ಕಾರಣವಾಗಬಹುದು. ಅತಿಯಾದ ಒತ್ತಡ ಮತ್ತು ಅನಾರೋಗ್ಯದಿಂದ ಕೂದಲು ಬೆಳ್ಳಗಾಗುತ್ತದೆ. ಕೆಲವು ಮನೆಮದ್ದುಗಳು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು

 

ಮೆಂತ್ಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿದರೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಮೆಂತ್ಯವು ಫೈಬರ್, ಪ್ರೋಟೀನ್ಗಳು, ಕಬ್ಬಿಣ, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಅಧಿಕ ತೂಕದಿಂದ ಬಳಲುತ್ತಿರುವ ಜನರು ಹೆಚ್ಚಾಗಿ ಮೆಂತ್ಯವನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳುತ್ತಾರೆ.

 

ಮೆಂತ್ಯ ಆರೋಗ್ಯ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು. ಇವು ಔಷಧೀಯ ಗುಣಗಳಿಂದ ತುಂಬಿವೆ. ಇದು ಕೂದಲನ್ನು ಬೇರುಗಳಿಂದ ಕಪ್ಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಮೆಂತ್ಯವು ಕಬ್ಬಿಣ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಅವು ಕೂದಲಿಗೆ ಪೋಷಣೆ ನೀಡುತ್ತವೆ ಮತ್ತು ಅದು ಬಿಳಿಯಾಗುವುದನ್ನು ತಡೆಯುತ್ತದೆ. ಜೊತೆಗೆ ಕೂದಲು ಉದುರುವುದನ್ನು ತಡೆದು, ಬೆಳವಣಿಗೆಯನ್ನು ಸುಧಾರಿಸುತ್ತದೆ.

 

ಮೆಂತ್ಯ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಬಿಳಿ ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ. ನೀರಿನಲ್ಲಿ ನೆನೆಸಿದ ಮೆಂತ್ಯವನ್ನು ತಿನ್ನುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುತ್ತದೆ.

 

ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಒಂದು ಚಮಚ ಮೆಂತ್ಯ ಕಾಳುಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದಾಗ ಹಲ್ಲುಜ್ಜಿ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರನ್ನು ಕುಡಿಯಿರಿ. ಇದರಿಂದ ಕೂದಲು ಕಪ್ಪಾಗುತ್ತದೆ.

 

ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಆ ನೀರಿನಲ್ಲಿ ಮುಂಜಾನೆ ಸ್ವಲ್ಪ ಉಪ್ಪು, ನಿಂಬೆರಸ, ಜೇನು ತುಪ್ಪ ಹಾಕಿ ಕುಡಿದರೆ ದೇಹದಿಂದ ಕೆಟ್ಟ ತ್ಯಾಜ್ಯವೆಲ್ಲ ಹೊರಹೋಗುತ್ತದೆ. ಜೊತೆಗೆ ಇಡೀ ದಿನ ಫ್ರೆಶ್‌ ಆಗಿರುತ್ತದೆ. ಮೆಂತ್ಯದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಬಹಳ ಸಹಾಯಕವಾಗಿದೆ. ಇದು ಹೊಟ್ಟೆನೋವು ಮತ್ತು ಉಬ್ಬುವಿಕೆಯಂತಹ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

 

 ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ನೀಡಲಾಗಿದೆ. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link