ತೆಂಗಿನೆಣ್ಣೆಯಲ್ಲಿ ಈ 3 ವಸ್ತುಗಳನ್ನು ಬೆರೆಸಿ ಹಚ್ಚಿದರೆ ಕ್ಷಣಾರ್ಧದಲ್ಲೇ ಕಡು ಕಪ್ಪಾಗುತ್ತೆ ಬಿಳಿ ಕೂದಲು
ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಾಮಾನ್ಯ ಸಂಗತಿ. ಆದರೆ, ಇತ್ತೀಚಿನ ದಿನಗಳಲ್ಲಿ ಕಳಪೆ ಆಹಾರ ಹಾಗೂ ಜೀವನಶೈಲಿ, ಕೂದಲಿನ ಆರೈಕೆ ಕೊರತೆಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಹೆಚ್ಚಾಗುತ್ತಿದೆ.
ನೆತ್ತಿಯನ್ನು ಆರೋಗ್ಯಕರವಾಗಿರಿಸಿ, ಕೂದಲನ್ನು ಕಪ್ಪಾಗಿಸಲು ಸಹಾಯಕವಾಗುವ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ತೆಂಗಿನೆಣ್ಣೆ ಕೂದಲನ್ನು ಹಲವು ಸಮಸ್ಯೆಗಳಿಂದ ರಕ್ಷಿಸುತ್ತದೆ.
ಆದಾಗ್ಯೂ, ತೆಂಗಿನೆಣ್ಣೆಯೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ತೆಂಗಿನ ಎಣ್ಣೆಯೊಂದಿಗೆ ಹರಳೆಣ್ಣೆ, ನಿಂಬೆ ರಸ ಇಲ್ಲವೇ ಈರುಳ್ಳಿ ರಸವನ್ನು ಬೆರೆಸಿ ಹಚ್ಚುವುದು ಕಪ್ಪು ಕೂದಲನ್ನು ಪಡೆಯಲು ಲಾಭದಾಯಕ ಎಂದು ಸಾಬೀತುಪಡಿಸಲಿದೆ.
ತೆಂಗಿನೆಣ್ಣೆ ಕೊಬ್ಬಿನಾಮ್ಲಗಳಲ್ಲಿ ಹೇರಳವಾಗಿದ್ದು ಕೂದಲನ್ನು ಬುಡದಿಂದ ಗಟ್ಟಿಯಾಗಿಸಲು ಸಹಾಯಕವಾಗಿದೆ. ಇದರಲ್ಲಿ ಹರಳೆಣ್ಣೆ ಬೆರೆಸಿ ಬಳಸುವುದರಿಂದ ಮಾಲಿನ್ಯದಿಂದ ಕೂದಲನ್ನು ರಕ್ಷಿಸಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯಕವಾಗಲಿದೆ.
ಈರುಳ್ಳಿ ರಸದಲ್ಲಿರುವ ಉರಿಯೂತ ಗುಣಲಕ್ಷಣಗಳು ನೆತ್ತಿಯನ್ನು ಸೋಂಕುಗಳಿಂದ ರಕ್ಷಿಸುತ್ತದೆ. ತೆಂಗಿನೆಣ್ಣೆಯೊಂದಿಗೆ ಈರುಳ್ಳಿ ರಸ ಬಳಸುವುದರಿಂದ ಕೂದಲುದುರುವಿಕೆ ಕಡಿಮೆಯಾಗುವುದರ ಜೊತೆಗೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ನೆತ್ತಿಯನ್ನು ಸ್ವಚ್ಛಗೊಳಿಸಿ, ಕೂದಲಿನ ಪೋಷಣೆಗೆ ಸಹಕಾರಿ ಆಗಿದೆ. ನಿಯಮಿತವಾಗಿ ತೆಂಗಿನೆಣ್ಣೆಯಲ್ಲಿ ನಿಂಬೆರಸ ಬೆರೆಸಿ ಹಚ್ಚುವುದರಿಂದ ಕ್ರಮೇಣ ಬಿಳಿ ಕೂದಲು ಕಪ್ಪಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.