ಅನ್ನ ಬೇಯಿಸುವಾಗ ಒಂದು ಚಮಚ ಈ ಎಣ್ಣೆ ಬೆರಸಿ... ಸೊಂಟದ ಸುತ್ತ ತುಂಬಿದ ಕೊಬ್ಬು ಬೆಣ್ಣೆ ಕರಗಿದಂತೆ ಕರಗುತ್ತೆ! ಬಳುಕುವ ಬಳ್ಳಿಯಂತೆ ಸ್ಲಿಮ್ ಆಗುವಿರಿ
ತೂಕ ಕಡಿಮೆ ಮಾಡಲು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದು ಅತ್ಯಂತ ಪರಿಣಾಮಕಾರಿ ಪರಿಹಾರ. ಆದರೆ ಇದನ್ನು ಮಾಡುವುದು ಕೆಲವೊಮ್ಮೆ ಕಷ್ಟವಾಗಬಹುದು. ತೂಕ ನಷ್ಟದ ಸಮಯದಲ್ಲಿ ಅನೇಕ ಜನರು ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ. ವಿಶೇಷವಾಗಿ ಅನ್ನವನ್ನು ತ್ಯಜಿಸುತ್ತಾರೆ.
ಅನ್ನ ತಿಂದರೂ ತೂಕ ಇಳಿಸಿಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಇದು ನಿಮಗೆ ಸ್ವಲ್ಪ ಆಶ್ಚರ್ಯವೆನಿಸಬಹುದು. ಆದರೆ ನೀವು ಅಡುಗೆ ಮಾಡುವಾಗ ಅಕ್ಕಿಯ ಕ್ಯಾಲೊರಿ ಅಂಶವನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಅನುಸರಿಸಬೇಕು ಎಷ್ಟೇ. ಅಡುಗೆಮನೆಯಲ್ಲಿ ಈ ವಿಶೇಷ ವಸ್ತುವನ್ನು ಬಳಕೆ ಮಾಡುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡಿಕೊಳ್ಳಬಹುದು.
ದೇಹದಲ್ಲಿ ಅಕ್ಕಿ ಗ್ಲೈಕೊಜೆನ್ ಆಗಿ ಪರಿವರ್ತನೆಯಾಗುತ್ತದೆ ಎಂದು ತಜ್ಞರು ನಂಬುತ್ತಾರೆ. ವ್ಯಾಯಾಮದ ನಂತರ ಅಥವಾ ಯಾವುದೇ ದೈಹಿಕ ಚಟುವಟಿಕೆಯ ನಂತರ ಅನ್ನವನ್ನು ಸೇವಿಸಿದರೆ, ಸ್ನಾಯುಗಳಿಗೆ ಶಕ್ತಿ ಸಿಗುತ್ತದೆ. ಇದನ್ನು ಮಾಡದಿದ್ದರೆ, ಗ್ಲೈಕೋಜೆನ್ ಶೀಘ್ರದಲ್ಲೇ ಗ್ಲೂಕೋಸ್ ಆಗಿ ಬದಲಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನಂತೆ ಶೇಖರಣೆಯಾಗುತ್ತದೆ.
ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (USC) ಪ್ರಕಾರ, ಅಕ್ಕಿಯಲ್ಲಿ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವೆಂದರೆ ಕುದಿಯುವ ನೀರಿಗೆ ಒಂದು ಟೀಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ನಂತರ ಅದರಲ್ಲಿ ಅಕ್ಕಿಯನ್ನು ಸುಮಾರು 25 ನಿಮಿಷಗಳ ಕಾಲ ಬೇಯಿಸುವುದು. ಹೀಗೆ ಮಾಡಿದ ನಂತರ, 12 ಗಂಟೆಗಳ ಕಾಲ ರೆಫ್ರಿಜರೇಟರ್ನಲ್ಲಿ ತಣ್ಣಗಾಗಿಸಬೇಕು. ಹೀಗೆ ಮಾಡುವುದರಿಂದ ಅಕ್ಕಿಯ ಕ್ಯಾಲೊರಿಗಳನ್ನು ಶೇಕಡಾ 60 ರಷ್ಟು ಕಡಿಮೆ ಮಾಡಬಹುದು.
ಅಕ್ಕಿ ಬೇಯಿಸಿದ ನಂತರ, ಹೆಚ್ಚುವರಿ ನೀರನ್ನು ಹೊರ ಚೆಲ್ಲಬೇಕು. ಕನಿಷ್ಠ 12 ಗಂಟೆಗಳ ಕಾಲ ರೆಫ್ರಿಜರೇಟರ್ನಲ್ಲಿ ಅದನ್ನು ತಣ್ಣಗಾಗಿಸಬೇಕು. ಜಿಲಾಟಿನೀಕರಣದ ಸಮಯದಲ್ಲಿ ಅಮೈಲೋಸ್ (ಪಿಷ್ಟದ ಕರಗುವ ಭಾಗ) ಕಣಗಳನ್ನು ಬಿಡುವುದರಿಂದ ಅನ್ನವನ್ನು ತಣ್ಣಗಾಗಿಸುವುದು ಅವಶ್ಯಕ ಎಂದು ಸಂಶೋಧಕರು ಹೇಳುತ್ತಾರೆ.
ಸಂಶೋಧನೆಯ ಪ್ರಕಾರ, ಪಿಷ್ಟವು ಅಕ್ಕಿಯ ಒಂದು ಅಂಶವಾಗಿದೆ. ಅದು ಸುಲಭವಾಗಿ ಜೀರ್ಣವಾಗುವುದಿಲ್ಲ, ಜೀರ್ಣವಾಗುವ ಪಿಷ್ಟವನ್ನು ನಿರೋಧಕ ಪಿಷ್ಟವಾಗಿ ಪರಿವರ್ತಿಸಿದಾಗ, ತೂಕ ಹೆಚ್ಚಾಗುವುದನ್ನು ತಪ್ಪಿಸಬಹುದು. ಇದರರ್ಥ ಕ್ಯಾಲೋರಿ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಇನ್ನು ಒಂದು ಚಮಚ ತೆಂಗಿನ ಎಣ್ಣೆ ಬೆರೆಸಿ ಅನ್ನವನ್ನು ಬೇಯಿಸುವುದು ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದು ಸಹ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.