ಜೇನಿನ ಜೊತೆ ಈ ಪುಡಿ ಬೆರೆಸಿ ನೆಕ್ಕಿದರೆ ತಕ್ಷಣವೇ ಶೀತ, ಕೆಮ್ಮು ಕಡಿಮೆಯಾಗುತ್ತೆ! ಜ್ವರಕ್ಕೂ ಇದೇ ರಾಮಬಾಣ
ಮಳೆಗಾಲ ಪ್ರಾರಂಭವಾಗಿದೆ. ಈ ಋತುವಿನಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಶೀತ, ಕೆಮ್ಮು ಜ್ವರ ಕೂಡ ಅವುಗಳಲ್ಲಿ ಒಂದು. ಅಂದಹಾಗೆ ಒಮ್ಮೆ ಕೆಮ್ಮು ಬಂದರೆ ಬೇಗ ಮಾಯುವುದಿಲ್ಲ. ಇದರ ಜೊತೆಗೆ ಶ್ವಾಸಕೋಶದಲ್ಲಿ ಕಫ ಕೂಡ ಸೇರಿಕೊಳ್ಳುತ್ತದೆ.
ದೀರ್ಘಕಾಲದ ಕೆಮ್ಮನ್ನು ತೊಡೆದುಹಾಕಲು ನೀವು ಪರಿಣಾಮಕಾರಿ ಮನೆಮದ್ದುಗಳನ್ನು ಹುಡುಕುತ್ತಿದ್ದರೆ ಕೆಲವು ಪರಿಹಾರಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತವೆ.
ಜೇನುತುಪ್ಪದಲ್ಲಿರುವ ಉರಿಯೂತ ನಿವಾರಕ ಮತ್ತು ಸೂಕ್ಷ್ಮಾಣು ನಿರೋಧಕ ಗುಣಗಳು ಕಫವನ್ನು ನಿವಾರಿಸಲು ತುಂಬಾ ಉಪಯುಕ್ತವಾಗಿದೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ತೆಗೆದುಹಾಕುವಲ್ಲಿ ಜೇನುತುಪ್ಪವು ಪರಿಣಾಮಕಾರಿಯಾಗಿದೆ.
ಶೀತ, ಕೆಮ್ಮು ಮಾತ್ರವಲ್ಲದೆ ಜ್ವರ, ತಲೆನೋವಿನಂತಹ ಸಮಸ್ಯೆಗಳ ನಿವಾರಣೆಗೆ 2 ಚಮಚ ಜೇನುತುಪ್ಪವನ್ನು ಒಂದು ಲೋಟ ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯಬೇಕು. ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚ ಜೇನುತುಪ್ಪವನ್ನು ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ.
ಇದಲ್ಲದೆ, ಶುಂಠಿ ಸೇವಿಸುವುದರಿಂದ ಕೂಡ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಹಸಿ ಶುಂಠಿಯನ್ನು ತಿನ್ನಬಹುದು ಅಥವಾ ಅದರ ರಸ ತೆಗೆದು ಕುಡಿಯಬಹುದು.
ಇನ್ನು ಒಂದು ಚಮಚ ಜೇನುತುಪ್ಪಕ್ಕೆ ಕಾಳುಮೆಣಸಿನ ಪುಡಿಯನ್ನು ಬೆರೆಸಿ ನೆಕ್ಕಿದರೆ ಶೀತ, ಕೆಮ್ಮು, ಗಂಟಲುನೋವಿನಂತಹ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಆದರೆ ಮಿತಿಮೀರಿ ಸೇವಿಸಿದರೆ ದೇಹದಲ್ಲಿ ಉಷ್ಣ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.