Bathing Tips For Freshness: ಸ್ನಾನ ಮಾಡುವಾಗ ಈ 5 ವಸ್ತುಗಳನ್ನು ನೀರಿನಲ್ಲಿ ಮಿಶ್ರಣ ಮಾಡಿದರೆ ದಿನವಿಡೀ ಫ್ರೆಶ್ ಫೀಲ್ ಸಿಗುತ್ತದೆ

Sun, 27 Nov 2022-12:21 pm,

ನಿಂಬೆ ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಸ್ನಾನದ ನೀರಿನಲ್ಲಿ ನಿಂಬೆ ರಸವನ್ನು ಸೆರೆಸಿದರೆ, ಬೆವರು ವಾಸನೆ ಹೋಗುತ್ತದೆ. ನೀವು ದಿನವಿಡೀ ತಾಜಾತನದಿಂದ ಇರುತ್ತೀರಿ.

ಇನ್ನೊಂದು ರೆಮೆಡಿ ಎಂದರೆ, ಗ್ರೀನ್ ಟೀ ಬಳಸುವುದು. ಗ್ರೀನ್ ಟೀಯನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ಬೆವರಿನ ವಾಸನೆ ದೂರವಾಗುತ್ತದೆ.

ಆಲಮ್ ಅಥವಾ ಹರಳೆಣ್ಣೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ನೀವು ಬಕೆಟ್ ಅಥವಾ ಟಬ್‌ನಲ್ಲಿ ಹರಳೆಣ್ಣೆಯನ್ನು ಬೆರೆಸಿದರೆ, ದೇಹದ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ. ದೇಹ ಫ್ರೆಶ್ ಆಗಿರುವ ಫೀಲ್ ಕೊಡುತ್ತದೆ.

ಅನೇಕ ಬಾರಿ ನಮ್ಮ ದೇಹವು ತುಂಬಾ ವಾಸನೆ ಬರುತ್ತದೆ. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ. ಆದ್ದರಿಂದ ಮೊದಲು ಸ್ನಾನದ ನೀರನ್ನು ಉಗುರುಬೆಚ್ಚಗಾಗಿಸಿ ಅದರಲ್ಲಿ ಕಲ್ಲು ಉಪ್ಪು ಮಿಶ್ರಣ ಮಾಡಿ. ಈ ರೀತಿ ಮಾಡುವುದರಿಂದ ದೇಹದ ವಾಸನೆಯನ್ನು ತೊಡೆದುಹಾಕಬಹುದು. ದಿನವಿಡೀ ನೀವು ತಾಜಾತನವನ್ನು ಅನುಭವಿಸುತ್ತೀರಿ.

ಬೇವಿನ ಎಲೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ನಮ್ಮ ಚರ್ಮವನ್ನು ರೋಗಗಳಿಂದ ರಕ್ಷಿಸುತ್ತದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದನ್ನು ಫಿಲ್ಟರ್ ಮಾಡಿ. ಬಳಿಕ ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ. ಇದರಿಂದ ಚರ್ಮದ ಸೋಂಕು, ತುರಿಕೆ ಮತ್ತು ಕೊಳೆ ನಿವಾರಣೆಯಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link