ಮಜ್ಜಿಗೆಗೆ ಇದೊಂದು ಪದಾರ್ಥ ಬೆರೆಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಸೊಂಟ ಸುತ್ತ ತುಂಬಿರುವ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!
ಆಹಾರ ತಜ್ಞರು ಅಥವಾ ವೈದ್ಯರು, ಪ್ರತಿಯೊಬ್ಬರೂ ಸಾಧ್ಯವಾದಷ್ಟು ದ್ರವ ಆಹಾರವನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಅದರಲ್ಲಿ ಮಜ್ಜಿಗೆಯ ಸೇವನೆ ಹೆಚ್ಚಿರಲಿ ಎಂಬುದು ಕೂಡ ಪ್ರಮುಖ ಸಲಹೆಯಾಗಿರುತ್ತದೆ.
ಮಜ್ಜಿಗೆ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದಲ್ಲದೆ, ಇದು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಮಜ್ಜಿಗೆ ಜೀರ್ಣಾಂಗ ವ್ಯವಸ್ಥೆಗೆ ವರದಾನವಿದ್ದಂತೆ. ಮಜ್ಜಿಗೆ ಆರೋಗ್ಯಕರ ಬ್ಯಾಕ್ಟೀರಿಯಾ ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಚಯಾಪಚಯ ಮಟ್ಟವನ್ನು ಹೆಚ್ಚಿಸುತ್ತದೆ.
ಮಜ್ಜಿಗೆ ನಮ್ಮ ದೇಹವನ್ನು ಅತಿ ಬೇಗ ತಂಪಾಗಿಸುತ್ತದೆ. ಜೀರಿಗೆ, ಪುದೀನಾ ಮತ್ತು ಉಪ್ಪಿನೊಂದಿಗೆ ಒಂದು ಲೋಟ ಮಜ್ಜಿಗೆ ಕುಡಿದರೆ ಬಾಯಾರಿಕೆಯನ್ನು ನೀಗಿಸಲು ಸಹಾಯಕವಾಗುತ್ತದೆ.
ಮಜ್ಜಿಗೆಯನ್ನು ಮೊಸರು ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ಇದು ಸುಮಾರು 90 ಪ್ರತಿಶತದಷ್ಟು ನೀರು ಮತ್ತು ಪೊಟ್ಯಾಸಿಯಮ್ನಂತಹ ಎಲೆಕ್ಟ್ರೋಲೈಟ್ಗಳನ್ನು ಹೊಂದಿರುತ್ತದೆ. ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡುವಲ್ಲಿ ಮಜ್ಜಿಗೆ ಪರಿಣಾಮಕಾರಿಯಾಗಿದೆ.
ಮಜ್ಜಿಗೆ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ. ಇದರೊಂದಿಗೆ ಕರಿಮೆಣಸು ಮತ್ತು ಶುಂಠಿಯನ್ನು ಹಾಕಿದರೆ ಮಜ್ಜಿಗೆಯ ಪೋಷಕಾಂಶಗಳು ಮತ್ತಷ್ಟು ಹೆಚ್ಚುತ್ತದೆ. ಈ ಪೋಷಕಾಂಶಗಳು ನಿಮಗೆ ಅಸಿಡಿಟಿಯಿಂದ ಉಪಶಮನ ನೀಡುತ್ತದೆ.
ಬಲವಾದ ರೋಗನಿರೋಧಕ ಶಕ್ತಿಗಾಗಿ, ಆರೋಗ್ಯಕರ ಕರುಳನ್ನು ಹೊಂದಿರುವುದು ಮುಖ್ಯ. ಮಜ್ಜಿಗೆ ಕರುಳನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ನಿಯಮಿತವಾಗಿ ಮಜ್ಜಿಗೆ ಕುಡಿಯುತ್ತಿದ್ದರೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹೆಚ್ಚಾಗಿ ಇದು ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.