ತೆಂಗಿನೆಣ್ಣೆ ಜೊತೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಸೆಕೆಂಡುಗಳಲ್ಲಿ ಬೇರಿನಿಂದಲೇ ಕಡುಕಪ್ಪಾಗುತ್ತೆ ಬಿಳಿಕೂದಲು! ಒಂದು ತಿಂಗಳವರೆಗೆ ಚಿಂತೆಯೇ ಬೇಡ...
ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯಿಂದ ದೇಹ, ಮುಖ ಮತ್ತು ಕೈ ಕಾಲುಗಳನ್ನು ಮಸಾಜ್ ಮಾಡಲಾಗುತ್ತದೆ. ಇದರಿಂದ ತ್ವಚೆಯು ಹೊಳೆಯುತ್ತದೆ.
ಇದರ ಹೊರತಾಗಿ ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಬಹುದು. ಹಲವರು ಸಾಸಿವೆ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತಾರೆ. ಕೆಲವರು ತೆಂಗಿನ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುತ್ತಾರೆ. ಆದರೆ ಸಾಸಿವೆ ಎಣ್ಣೆ ಮತ್ತು ತೆಂಗಿನೆಣ್ಣೆಯನ್ನೂ ಬೆರೆಸಿ ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುತ್ತದೆ.
ಕೂದಲು ಕಪ್ಪು, ದಪ್ಪ ಮತ್ತು ಬಲವಾಗಿರಲು ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.
ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ದಪ್ಪ ಮತ್ತು ಕಪ್ಪಾಗುತ್ತದೆ. ಆದರೆ ಸಾಸಿವೆ ಎಣ್ಣೆಯೊಂದಿಗೆ ತೆಂಗಿನೆಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಬೇರುಗಳಿಂದ ಬಲಗೊಳ್ಳುತ್ತದೆ.
ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದು. ವಾರಕ್ಕೆ 2-3 ಬಾರಿ ಈ ವಿಧಾನವನ್ನು ಅನುಸರಿಸಿದರೆ ಕೂದಲು ಉದುರುವಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಚಿಕ್ಕ ವಯಸ್ಸಿನಲ್ಲೇ ಬಿಳಿಕೂದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಬಿಳಿ ಕೂದಲಿಗೆ ಈ ಎರಡು ಎಣ್ಣೆಗಳ ಮಿಶ್ರಣವನ್ನು ಬೆರೆಸಿ ಹಚ್ಚಿದರೆ ತಿಂಗಳಾನುಗಟ್ಟಲೆ ಕೂದಲು ಕಪ್ಪಾಗಿರುವಂತೆ ಮಾಡಬಹುದು.
ಸಾಸಿವೆ ಮತ್ತು ತೆಂಗಿನ ಎಣ್ಣೆಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇವೆರಡನ್ನು ಬೆರೆಸಿ ಕೂದಲಿಗೆ ಹಚ್ಚಿದರೆ, ನೆತ್ತಿಯಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ತಲೆಯಲ್ಲಿ ಡ್ಯಾಂಡ್ರಫ್ ಅಥವಾ ಇತ್ಯಾದಿಗಳ ಸಮಸ್ಯೆ ಇದ್ದರೆ, ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಬಹುದು. ಈ ಮೂಲಕ ತಲೆಹೊಟ್ಟು ಹೋಗಲಾಡಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.