ಮಗು ಹುಟ್ಟಿದ ಕುಟುಂಬಕ್ಕೆ ಹಣ ನೀಡುತ್ತೆ ಮೋದಿ ಸರ್ಕಾರ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
ಕೇಂದ್ರ ಸರ್ಕಾರದ ಈ ಯೋಜನೆಯ ಹೆಸರು ‘ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ’(Pradhan Mantri Matru Vandana Yojana). ಇದರಡಿ 5,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು ಜನವರಿ 1, 2017ರಂದು ಪ್ರಾರಂಭಿಸಲಾಯಿತು.
‘ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ’ ಅಡಿಯಲ್ಲಿ ಮೊದಲ ಬಾರಿಗೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು ‘ಪ್ರಧಾನ ಮಂತ್ರಿ ಗರ್ಭಾವಸ್ಥೆಯ ನೆರವು ಯೋಜನೆ’(Pradhan Mantri Pregnancy Assistance Scheme)ಎಂದೂ ಕರೆಯಲಾಗುತ್ತದೆ.
ಈ ಯೋಜನೆಯ ಲಾಭ ಪಡೆಯಲು ಮೊದಲ ಬಾರಿಗೆ ಗರ್ಭಿಣಿಯಾದ ಮಹಿಳೆಯರು ಹೆಸರು ನೋಂದಣಿಗಾಗಿ ತಮ್ಮ ಮತ್ತು ಪತಿಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪಾಸ್ಸ್‌ಪೋರ್ಟ್ ಸೈಜ್ ಫೋಟೋ ಹೊಂದಿರುವುದು ಅವಶ್ಯಕ. ಬ್ಯಾಂಕ್ ಖಾತೆ ಜಂಟಿಯಾಗಿರಬಾರದು. ಯೋಜನೆಯಡಿ ಗರ್ಭಿಣಿಯರಿಗೆ 3 ಕಂತುಗಳಲ್ಲಿ 5000 ರೂ. ಹಣ ಬರುತ್ತದೆ.
ಮೊದಲ ಬಾರಿಗೆ ತಾಯಂದಿರಾಗುವ ಮಹಿಳೆಯರಿಗೆ ಪೌಷ್ಟಿಕಾಂಶವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. 5,000 ರೂ.ಗಳಲ್ಲಿ ಮೊದಲ ಕಂತು 1,000 ರೂ, 2ನೇ ಕಂತು 2,000 ರೂ ಮತ್ತು 3ನೇ ಕಂತು 2,000 ರೂಪಾಯಿ ಸಿಗುತ್ತದೆ. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಈ ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ಕಳುಹಿಸಲಾಗುತ್ತದೆ.
ನೀವು ASHA ಅಥವಾ ANM ಮೂಲಕ PM Matritva Vandana Yojana ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಯೋಜನೆಯ ಪ್ರಯೋಜನವನ್ನು ಎಲ್ಲಾ ಮಹಿಳೆಯರಿಗೆ ಒದಗಿಸಲಾಗಿದೆ. ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಆಗಲಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.