ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ಮೊಹಮ್ಮದ್‌ ಶಮಿ..ಭಾರತಕ್ಕೆ ಅಲ್ಲ ಮುಂಬರುವ ಪಂದ್ಯದಲ್ಲಿ ಇವರು ಆಡುವುಡು ʻಈʼ ತಂಡಕ್ಕೆ..!

Sat, 03 Aug 2024-1:34 pm,

ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಗಾಯದಿಂದಾಗಿ ಮೈದಾನದಿಂದ ಹೊರಗುಳಿದಿದ್ದರು. ಇದೀಗ ಶಮಿ ಅವರೇ ಕ್ರಿಕೆಟ್‌ಗೆ ವಾಪಸಾದ ಕುರಿತು ಅಭಿಮಾನಿಗಳೊಂದಿಗೆ ದೊಡ್ಡ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿಶ್ವಕಪ್ 2023 ರಿಂದ ಮೈದಾನದಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ ನವೆಂಬರ್ 2023 ರಲ್ಲಿ ನಡೆದ ODI ವಿಶ್ವಕಪ್‌ನಲ್ಲಿ ಅವರು ಕಾಲಿನ ಗಾಯದಿಂದ ತೊಂದರೆಗೊಳಗಾಗಿದ್ದರು. ಅದರ ನಂತರ, ಫೆಬ್ರವರಿ 2024 ರಲ್ಲಿ, ಅವರು ತಮ್ಮ ಪಾದದ ಗಾಯಕ್ಕೆ  ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಪ್ರಸ್ತುತ ಮೈದಾನಕ್ಕೆ ಮರಳಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶ್ರಮಿಸುತ್ತಿದ್ದಾರೆ.ಯಾವಾಗ ಟೀಂ ಇಂಡಿಯಾಗೆ ಮರಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏತನ್ಮಧ್ಯೆ, ಮೊಹಮ್ಮದ್ ಶಮಿ ತಂಡಕ್ಕೆ ವಾಪಸ್‌ ಆಗುವ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.  

ಮೊಹಮ್ಮದ್ ಶಮಿ ಸದ್ಯ ಬಂಗಾಳದಲ್ಲಿದ್ದಾರೆ. ಇತ್ತೀಚೆಗೆ ಶಮಿ ಅವರನ್ನು ಕೋಲ್ಕತ್ತಾದಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ಗೌರವಿಸಿತ್ತು. ಈ ವೇಳೆ ತಮ್ಮ ಉಪಸ್ಥಿಸಿ ಕುರಿತು ಮಾತನಾಡುತ್ತಾ, ಟೀಂ ಇಂಡಿಯಾಗೆ ವಾಪಸಾಗುವ ಮುನ್ನ ದೇಶೀಯ ಕ್ರಿಕೆಟ್ ಆಡುವ ಯೋಜನೆಯಲ್ಲಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶಮಿ, 'ನಾನು ಯಾವಾಗ ಮರಳುತ್ತೇನೆ ಎಂದು ಹೇಳುವುದು ಕಷ್ಟ. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಆದರೆ ಮತ್ತೆ ಭಾರತೀಯ ಜೆರ್ಸಿಯನ್ನು ಧರಿಸುವ ಮೊದಲು, ನೀವು ನನ್ನನ್ನು ಬಂಗಾಳದ ಜೆರ್ಸಿಯಲ್ಲಿ ನೋಡುತ್ತೀರಿ. ನಾನು ಬಂಗಾಳಕ್ಕೆ 2-3 ಪಂದ್ಯಗಳನ್ನು ಆಡಲು ಸಂಪೂರ್ಣ ಸಿದ್ಧರಾಗಿ ಬರುತ್ತೇನೆ" ಎಂದಿದ್ದಾರೆ. ಅಂದರೆ ಮುಂಬರುವ ದೇಶೀಯ ಋತುವಿನಲ್ಲಿ ಶಮಿ ಬಂಗಾಳ ತಂಡದಲ್ಲಿ ಆಡುವುದನ್ನು ಕಾಣಬಹುದು.  

ತಮ್ಮ ಗಾಯದ ಬಗ್ಗೆ ಮಾತನಾಡಿದ ಶಮಿ, 'ಗಾಯವು ಇಷ್ಟು ಕೆಟ್ಟದಾಗಿರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಗಾಯವು ಇಷ್ಟು ಗಂಭೀರವಾಗಿರುತ್ತದೆ ಮತ್ತು ಗುಣವಾಗಲು ಇಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರೂ ಭಾವಿಸಿರಲಿಲ್ಲ" ಎಂದಿದ್ದಾರೆ. ಶಮಿ 2023 ರ ODI ವಿಶ್ವಕಪ್‌ನ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು 7 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಫೈನಲ್‌ಗೆ ತಲುಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.  

ಮೊಹಮ್ಮದ್ ಶಮಿ ಇದುವರೆಗೆ ಟೀಂ ಇಂಡಿಯಾ ಪರ 64 ಟೆಸ್ಟ್, 101 ಏಕದಿನ ಹಾಗೂ 23 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 229, ಏಕದಿನದಲ್ಲಿ 195 ಮತ್ತು ಟಿ20ಯಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು 11 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶಮಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಅರ್ಧಶತಕ ಸೇರಿದಂತೆ 970 ರನ್ ಗಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link