ಡಿವೋರ್ಸ್ ಬೆನ್ನಲ್ಲೇ ಶಮಿ ಜೊತೆ ಸಾನಿಯಾ ಮಿರ್ಜಾ ವಿವಾಹ! ಮೂಗುತಿ ಸುಂದರಿ ಜೊತೆ 2ನೇ ಮದುವೆಗೆ ರೆಡಿಯಾದ್ರಾ ಸ್ಟಾರ್ ಬೌಲರ್?

Wed, 05 Jun 2024-4:28 pm,
Mohammed Shami And Sania Mirza Marriage Fake News

ಇತ್ತೀಚೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಬೇರೆಯಾಗಲು ನಿರ್ಧರಿಸಿದ್ದರು. ಇದಾದ ಕೆಲವು ದಿನಗಳ ಬಳಿಕ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು

Mohammed Shami And Sania Mirza Marriage Fake News

ಕಳೆದ ಒಂದು ವರ್ಷದಿಂದ ಸಾನಿಯಾ ಮತ್ತು ಶೋಯೆಬ್ ವಿಚ್ಛೇದನದ ಸುದ್ದಿ ಬರುತ್ತಿತ್ತು. ಇದೀಗ ದೃಢವಾದ ಬಳಿಕ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ಮೊಹಮ್ಮದ್ ಶಮಿ ಮತ್ತು ಸಾನಿಯಾ 2ನೇ ವಿವಾಹವಾಗುತ್ತಿದ್ದಾರೆ.

Mohammed Shami And Sania Mirza Marriage Fake News

ಕಳೆದ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಸಾನಿಯಾ ಮಿರ್ಜಾ ಮತ್ತು ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಇದ್ದು, ಇಬ್ಬರೂ ಮದುವೆಯ ದಿರಿಸುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶೋಯೆಬ್ ಮಲಿಕ್‌’ನಿಂದ ಬೇರ್ಪಟ್ಟ ನಂತರ ಸಾನಿಯಾ ಮಿರ್ಜಾ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿಯನ್ನು ಮದುವೆಯಾಗಿದ್ದಾರೆ ಎಂಬ ಮಾತುಗಳ ಈ ಫೋಟೋದ ಬೆನ್ನಲ್ಲೇ ಹರಿದಾಡಲು ಪ್ರಾರಂಭವಾಗಿದೆ. ಆದರೆ ಇವರಿಬ್ಬರಿಗೂ ಮದುವೆಯಾಗಿಲ್ಲ. ಬದಲಾಗಿ ನಕಲಿ ಫೋಟೋ ಇದಾಗಿದ್ದು, AI ಆಧಾರಿತವಾಗಿದೆ.

ಇನ್ನೊಂದು ಫೋಟೋ ಕೂಡ ವೈರಲ್ ಆಗಿದ್ದು, ಇದರಲ್ಲಿ ಶೋಯೆಬ್ ಫೋಟೋ ಮೇಲೆ ಶಮಿ ಫೋಟೋವನ್ನು ಎಡಿಟ್ ಮಾಡಲಾಗಿದೆ. ಇದು ಕೂಡ ಎಲ್ಲೆಡೆ ವೈರಲ್ ಆಗಿದ್ದು, ಸಾನಿಯಾ ಅವರು ಶೀಘ್ರದಲ್ಲೇ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link