ಮೊಹಮದ್ ಶಮಿ-ಸಾನಿಯಾ ಮಿರ್ಜಾ ದುಬೈ ಟ್ರಿಪ್ !ಫೋಟೋಗಳೇ ಹೇಳುತ್ತಿವೆ ಎಲ್ಲಾ ಕತೆ!
ಮಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಇಬ್ಬರ ಜೀವನವೂ ಒಂದೇ ದಿಕ್ಕಿನಲ್ಲಿ ಸಾಗುತ್ತಿದೆ. ಇವರಿಬ್ಬರದ್ದೂ ಪ್ರೇಮ ವಿವಾಹವಾಗಿದ್ದರೂ ವೈವಾಹಿಕ ಜೀವನ ಮಾತ್ರ ಹಳಿ ತಪ್ಪಿದೆ.
ಆದರೆ ಇವರಿಬ್ಬರ ಬಗ್ಗೆ ಹೊಸ ಸುದ್ದಿಯೊಂದು ಎಲ್ಲೆಡೆ ಹರಿದದಿದೆ. ಇವರಿಬ್ಬರು ಪರಸ್ಪರ ಡೇಟ್ ಮಾಡುತ್ತಿದ್ದಾರೆ, ಇನ್ನೇನು ಹೊಸ ವರ್ಷದಲ್ಲಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದರ ನಡುವೆ ಇವರಿಬ್ಬರು ಕೂಡಾ ಜೊತೆಯಲ್ಲಿ ದುಬೈ ಟ್ರಿಪ್ ನಲ್ಲಿದ್ದಾರೆ ಎನ್ನಲಾಗಿದೆ. ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ದುಬೈನಲ್ಲಿ ಭೇಟಿಯಾದ ಸುದ್ದಿ ಕ್ರೀಡಾ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿದೆ.
ಇವರಿಬ್ಬರು ದುಬೈನಲ್ಲಿ ಜೊತೆಯಾಗಿ ಕಾಲ ಕಳೆಯುತ್ತಿದ್ದರೆ ಎನ್ನುವಂತೆ ಕೆಲವು ಫೋಟೋಗಳು ಹರಿದಾಡುತ್ತಿದೆ. ಈ ಫೋಟೋಗಳಲ್ಲಿ ಇಬ್ಬರೂ ಬಹಳ ಸಂತೋಷದಿಂದ ಇರುವುದನ್ನು ಗಮನಿಸಬಹುದು.
ಇಬ್ಬರೂ ಜೊತೆಯಾಗಿ ಕ್ರಿಸ್ ಮಸ್ ಆಚರಣೆ ಮಾಡುತ್ತಿದ್ದು, ಇನ್ನೇನು ಮದುವೆ ದಿನಾಂಕ ಘೋಷಿಸಿಯೇ ಬಿಡುತ್ತಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.
ಈ ಫೋಟೋಗಳ ಹಿಂದೆ ಇರುವ ಸತ್ಯ ಏನು ಎಂದು ನೋಡುವುದಾದರೆ ಇವೆಲ್ಲವೂ ಎಐ ಜನರೇಟೆಡ್ ಫೋಟೋಗಳು. ಈ ಫೋಟೋಗಳನ್ನೇ ಫೋಟೋ ಶೂಟ್ ಎನ್ನುವಂತೆ ಕೆಲವರು ಹರಿ ಬಿಟ್ಟಿದ್ದಾರೆ.
ಇನ್ನು ಕೆಲವರು ನಮ್ಮ ಮನದ ಆಸೆಯೂ ಇದೇ ಆಗಿದೆ. ಈ ಜೋಡಿ ಆದಷ್ಟು ಬೇಗ ಒಂದಾಗಲಿ ಎಂದು ಶುಭ ಕೋರಿದ್ದಾರೆ.
ಆದರೆ ಇವರಿಬ್ಬರ ನಡುವಿನ ಸ್ನೇಹ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ಸುದ್ದಿ ಬಗ್ಗೆ ಈ ಮೊದಲೇ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.ಇದು ಎಂದಿಗೂ ಸಾಧ್ಯವಾಗದ ಮಾತು ಎಂದು ಖಡಾ ಖಂಡಿತವಾಗಿಯೇ ಹೇಳಿದ್ದಾರೆ.
ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಇವರಿಬ್ಬರೂ ಒಂದಾಗಲಿ ಎನ್ನುವವರ ಸಂಖ್ಯೆಯೇ ಹೆಚ್ಚು.