ಎಆರ್ ರೆಹಮಾನ್ ಜೊತೆ ಮೋಹಿನಿ ಡೇ ರಹಸ್ಯ ಸಂಬಂಧ..!? ಕೊನೆಗೂ ಸತ್ಯ ಬಿಚ್ಚಿಟ್ಟ ಬಾಸ್ ವಾದಕಿ
ಎಆರ್ ರೆಹಮಾನ್ ಅವರ ಪತ್ನಿ ಸಾಯಿರಾ ಭಾನು ಅವರು ತಮ್ಮ ವಕೀಲ ವಂದನಾ ಶಾ ಮೂಲಕ ತಾವು ಅಧಿಕೃತವಾಗಿ ತಮ್ಮ ಪತಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದರು. ಅಂದಿನಿಂದ ಪ್ರತಿದಿನ ಒಂದಲ್ಲ ಒಂದು ವಿವಾದಾತ್ಮಕ ವಿಷಯ ಸುದ್ದಿಯಲ್ಲಿದೆ.
ಸಾಯಿರಾ ಮತ್ತು ಎಆರ್ ರೆಹಮಾನ್ 1995ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಇದೀಗ 29 ವರ್ಷದ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಸ್ವಲ್ಪ ಆಘಾತಕ್ಕೊಳಗಾಗಿದ್ದಾರೆ.
ಎಆರ್ ರೆಹಮಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ಅವರ ಮಗಳ ಮದುವೆಯೂ ಅದ್ಧೂರಿಯಾಗಿ ನಡೆಯಿತು. ಆದರೆ ಕೆಲ ತಿಂಗಳಿಂದ ಸಾಯಿರಾ ಮತ್ತು ರೆಹಮಾನ್ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ... ಕೊನೆಗೆ ಜಗಳವಾಡುವುದಕ್ಕಿಂತ ಬೇರ್ಪಡುವುದೇ ಮೇಲು ಎಂದುಕೊಂಡಂತಿದೆ..
ಸಂಗೀತ ನಿರ್ದೇಶಕ ಎಆರ್ ರೆಹಮಾನ್ ವಿಚ್ಛೇದನವನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ, ಅವರ ಮಾಜಿ ಬಾಸ್ ವಾದಕಿ ಮತ್ತು ಗಾಯಕಿ ಮೋಹಿನಿ ಡೇ ಕೂಡ ತನ್ನ ಪತಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದರು ಎಂದು ಹೇಳಲಾಗಿದೆ.
ಇದನ್ನು ಗಮನಿಸಿದ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಎಆರ್ ರೆಹಮಾನ್ ಸಂಬಂಧ ಕುರಿತು ಇಲ್ಲ ಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ.. ಅಲ್ಲದೆ, ರೆಹಮಾನ್ ಜೊತೆ ಮೋಹಿನಿಗೆ ಸಂಬಂಧ ಇದೆ ಎಂದು ವದಂತಿ ಹಬ್ಬಿಸಿದರು..
ಇನ್ನು ಸಾಯಿರಾ ಭಾನು ಪರ ವಕೀಲರು ಈ ವದಂತಿಗಳನ್ನು ನಿರಾಕರಿಸಿದ್ದಾರೆ. ಮೋಹಿನಿ ಡೇ ಸಹ ಪ್ರತಿಕ್ರಿಯೆ ನೀಡಿದ್ದು, ಆಧಾರ ರಹಿತ ವದಂತಿಗಳನ್ನು ಹಬ್ಬಿಸಿ ಶಕ್ತಿ ಹಾಳು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಕೆಲವು ಮಂದಿ ಕರೆ, ಸಂದೇಶ ಕಳುಹಿಸುವುದರಿಂದ ಬೇಸತ್ತಿದ್ದೇನೆ. ಇಂತಹ ಕೆಲಸಗಳನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ವತಃ ಮೋಹಿನಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಎಆರ್ ರೆಹಮಾನ್ ಮತ್ತು ಮೋಹಿನಿ ಡೇ ವದಂತಿಗೆ.. ರೆಹಮಾನ್ ಮಕ್ಕಳೂ ಸೀರಿಯಸ್ ಆಗಿದ್ದಾರೆ.