ಮುಖದ ಈ ಭಾಗದಲ್ಲಿ ಮಚ್ಚೆ ಇದ್ರೆ ಐಷಾರಾಮಿ ಜೀವನ ಗ್ಯಾರಂಟಿ!
ಹಣೆಯ ಮೇಲೆ ಮಚ್ಚೆ ಇರುವವರು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅಷ್ಟೇ ಅಲ್ಲದೆ, ಪ್ರಯಾಣ ಹೆಚ್ಚು ಮಾಡುತ್ತಾರೆ. ಈ ಜನರು ತಮ್ಮ ಜೀವನದ ಆರಂಭದಲ್ಲಿ ತುಂಬಾ ಕಷ್ಟಪಡುತ್ತಾರೆ. ಆದರೆ ಆ ಬಳಿಕ ಕಠಿಣ ಪರಿಶ್ರಮದ ನಂತರ, ಅವರ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.
ನಿಮ್ಮ ಬೆನ್ನಿನಲ್ಲಿ ಮಚ್ಚೆ ಇದ್ದರೆ ನೀವು ತುಂಬಾ ಅದೃಷ್ಟವಂತರು. ನೀವು ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸದಿರುವುದರಿಂದ ನಿಮ್ಮ ಹೆಚ್ಚಿನ ಆಸೆಗಳು ಈಡೇರುತ್ತವೆ. ನೀವು ವ್ಯಾಪಾರ ಮಾಡಿದರೆ, ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.
ಹುಬ್ಬಿನ ಸುತ್ತ ಮಚ್ಚೆ ಇರುವವರು ಭವಿಷ್ಯದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ ಎಂದರ್ಥ. ಅಲ್ಲದೆ, ಅವರ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ ಮತ್ತು ಅವರು ತುಂಬಾ ಸುಂದರವಾದ ಹುಡುಗಿ/ಹುಡುಗನನ್ನು ಮದುವೆಯಾಗುತ್ತಾರೆ.
ಕಿವಿಯ ಸುತ್ತ ಮಚ್ಚೆ ಇರುವವರು ಭವಿಷ್ಯದಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ. ಮತ್ತು ಅವರ ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ.
ತುಟಿಗಳ ಮೇಲೆ ಮಚ್ಚೆ ಇರುವ ಜನರು, ಭವಿಷ್ಯದಲ್ಲಿ ಹೆಚ್ಚು ದುಡ್ಡು ಮಾಡುತ್ತಾರೆ. ಅವರು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಇನ್ನು ತುಟಿಗಳ ಕೆಳಗೆ ಮಚ್ಚೆಯನ್ನು ಹೊಂದಿದ್ದರೆ ಅವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ.