Momos Recipe: ಯಮ್ಮಿ ಯಮ್ಮಿ ಮೊಮೊಸ್ ಮನೆಯಲ್ಲೇ ತಯಾರಿಸುವ ವಿಧಾನ ತಿಳಿಯಿರಿ..!
ಮೊಮೊಸ್ ಅನ್ನು ಆವಿಯಲ್ಲಿ ಬೇಯಿಸಬಹುದು ಅಥವಾ ಡೀಪ್ ಫ್ರೈ ಮಾಡಬಹುದು. ಮೊಮೊಸ್ ಅನ್ನು ಮಕ್ಕಳು ಮತ್ತು ವಯಸ್ಕರು ಇಷ್ಟಪಡುತ್ತಾರೆ. ಇದು ರೆಡ್ ಸಾಸ್‌ನೊಂದಿಗೆ ಉತ್ತಮ ರುಚಿಯನ್ನು ನೀಡುತ್ತದೆ. ಈ ಖಾದ್ಯವನ್ನು ಮನೆಯಲ್ಲಿ ತಯಾರಿಸುವ ವಿಧಾನ ತಿಳಿಯಿರಿ.
ಮೊಮೊಸ್ ತಯಾರಿಸಲು ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು ಒಂದು ಕಪ್, ಎಲೆಕೋಸು, ಕ್ಯಾಪ್ಸಿಕಂ, ತುರಿದ ಕ್ಯಾರೆಟ್ ½ ಕಪ್, ಕಾಳುಮೆಣಸಿನ ಪುಡಿ ½ ಟೀಚಮಚ, ಶುಂಠಿ, ಬೆಳ್ಳುಳ್ಳಿ, ಸೋಯಾ ಸಾಸ್ ½ ಟೀಚಮಚ, ಉಪ್ಪು, ಎಣ್ಣೆ.
ಮೊದಲು ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಉಪ್ಪು ಮತ್ತು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಘಂಟೆಯವರೆಗೆ ಬಿಡಿ.
ಮತ್ತೊಂದು ಬಟ್ಟಲಿನಲ್ಲಿ ಸಣ್ಣದಾಗಿ ಕೊಚ್ಚಿದ ಎಲೆಕೋಸು, ಕ್ಯಾಪ್ಸಿಕಂ, ಕ್ಯಾರೆಟ್, ಉಪ್ಪು, ಮೆಣಸು, ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ, ಸೋಯಾ ಸಾಸ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನು ನೆನೆಸಿದ ಹಿಟ್ಟಿಗೆ ಸೇರಿಸಿ. ಈಗ ಮೈದಾ ಹಿಟ್ಟಿನ ಸಣ್ಣ ಉಂಡೆ ತೆಗೆದುಕೊಂಡು ಸ್ಟಫ್ ತುಂಬಿ ಮೋದಕದ ರೀತಿ ಅಂಚುಗಳನ್ನು ಮಡಚಿಕೊಳ್ಳಿ. ಇಡ್ಲಿಯಂತೆ ಹತ್ತು ನಿಮಿಷ ಹಬೆಯಲ್ಲಿ ಬೇಯಿಸಿ. ಈಗ ಮೊಮೊಸ್ ಸವಿಯಲು ಸಿದ್ಧವಾಗಿದೆ.