Earn Money Tips: ಹಣಕಾಸಿನ ಮುಗ್ಗಟ್ಟು ನಿವಾರಣೆಗಾಗಿ ಮನೆಯ ಮುಖ್ಯದ್ವಾರದ ಮೇಲೆ ಇವುಗಳನ್ನು ಬಳಸಿ

Fri, 10 Jun 2022-1:37 pm,

1. ಶ್ರೀಗಣೇಶನಿಗೆ ವಿಘ್ನಹರ್ತಾ ಅಂದರೆ ಸಕಲ ಸಂಕಷ್ಟಗಳನ್ನು ನಿವಾರಿಸುವವ ಎಂದು ಕರೆಯಲಾಗುತ್ತದೆ. ಹೀಗಾಗಿ ಮನೆಯ ಮುಖ್ಯದ್ವಾರದ ಮೇಲೆ ಗಣೇಶನ ಫೋಟೋ ಅಂಟಿಸಿ ಸಂಕಷ್ಟಗಳಿಂದ ಪಾರಾಗಬಹುದು. ಒಂದು ವೇಳೆ ಮನೆಯಲ್ಲಿ ವಾಸ್ತುದೋಷವಿದ್ದರೆ, ಮುಖ್ಯದ್ವಾರದ ಚೌಕಟ್ಟಿನ ಮೇಲ್ಭಾಗದಲ್ಲಿ ಒಂದು ಮನೆಯೊಳಗೆ ನೋಡುವ ಮತ್ತು ಇನ್ನೊಂದು ಮನೆಯಿಂದ ಹೊರನೋಡುವ ಗಣೇಶನ ಟೈಲ್ಸ್ ಅಥವಾ ಚಿತ್ರವನ್ನು ಹಚ್ಚಿ. ಎರಡೂ ಗಣಪನ ಬೆನ್ನುಗಳು ಪರಸ್ಪರ ಅಂಟಿಕೊಂಡಿದ್ದರೆ ಇನ್ನೂ ಉತ್ತಮ.ಈ ರೀತಿ ಮಾಡುವುದರಿಂದ ಮನೆಯಲ್ಲಿ ಬಡತನ ಬರುವುದಿಲ್ಲ ಹಾಗೂ ಧನದ ಹರಿವು ಮನೆಯಲ್ಲಿ ಹೆಚ್ಚಾಗುತ್ತದೆ. 

2. ಸೂರ್ಯ ದೇವ ಅಪಾರ ಶಕ್ತಿಯನ್ನು ನೀಡುತ್ತಾನೆ. ಯಶಸ್ಸು, ಆರೋಗ್ಯ ಹಾಗೂ ಸಮೃದ್ಧಿಯನ್ನು ದಯಪಾಲಿಸುತ್ತಾನೆ. ಹೀಗಾಗಿ ಮನೆಯ ಮುಖ್ಯದ್ವಾರದ ಮೇಲೆ ತಾಮ್ರದಿಂದ ಮಾಡಿದ ಸೂರ್ಯನ ಪ್ರತಿಮೆಯನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವಾಗಲು ಸಕಾರಾತ್ಮಕತೆ ಹೆಚ್ಚಾಗುತ್ತದೆ. ಇದರ ಜೊತೆಗೆ ವಾಸ್ತು ದೋಷ ಕೂಡ ನಿವಾರಣೆಯಾಗುತ್ತದೆ. 

3. ಶನಿ ದೇವನ ಕೃಪೆಯಿಂದ ಯಾವುದೇ ವ್ಯಕ್ತಿಯ ಭಾಗ್ಯ ಕ್ಷಣಾರ್ಧದಲ್ಲಿ ಬದಲಾಯಿಸುತ್ತದೆ. ಸಾಮಾನ್ಯವಾಗಿ ಶಮಿ ವೃಕ್ಷ ಶನಿದೇವನನ್ನು ಪ್ರತಿನಿಧಿಸುತ್ತದೆ. ಹೀಗಿರುವಾಗ ಮನೆಯ ಮುಖ್ಯದ್ವಾರದ ಎರಡೂ ಕಡೆಗಳಲ್ಲಿ ಶಮಿ ಗಿಡಗಳನ್ನು ಹಚ್ಚಿ. ಇದರಿಂದ ನಿಮ್ಮ ಜೀವನದಲ್ಲಿನ ಕೆಟ್ಟ ಕಾಲ ದೂರಾಗುತ್ತದೆ ಮತ್ತು ಎಲ್ಲಾ ಸಂಕಷ್ಟಗಳು ನಿವಾರಣೆಯಾಗಿ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ನಿತ್ಯ ಶಮಿ ವೃಕ್ಷಕ್ಕೆ ನೀರುಣಿಸಿ ಹಾಗೂ ಪೂಜೆ ಮಾಡುವುದನ್ನು ಮರೆಯಬೇಡಿ.

4. ವಾಸ್ತು ಶಾಸ್ತ್ರದಲ್ಲಿ ಕೆಲ ವಿಶೇಷ ಚಿಹ್ನೆಗಳನ್ನು ಅತ್ಯಂತ ಶುಭ ಎಂದು ಹೇಳಲಾಗಿದೆ. ಈ ಚಿಹ್ನೆಗಳು ಗುಡ್ ಲುಕ್ ಗೆ ಕಾರಣ ಎನ್ನಲಾಗುತ್ತದೆ. ಈ ಚಿಹ್ನೆಗಳನ್ನು ಮಾಹೆಯ ಮುಖ್ಯದ್ವಾರದ ಮೇಲೆ ಬಳಸಿ. ಉದಾಹರಣೆಗೆ ಸ್ವಸ್ತಿಕ ಚಿಹ್ನೆ, ಶುಭ-ಲಾಭ, ಓಂ ಇತ್ಯಾದಿಗಳು. ಈ ರೀತಿ ಮಾಡುವುದರಿಂದ ಮನೆಯಲ್ಲಿ ತುಂಬಾ ಸುಖ-ಸಮೃದ್ಧಿ ಹರಿದುಬರುತ್ತದೆ ಎನ್ನಲಾಗುತ್ತದೆ. 

5. ಮನೆಯ ಮುಖ್ಯದ್ವಾರದ ಎರಡೂ ಬದಿಗೆ ನಿತ್ಯ ಹಸುವಿನ ತುಪ್ಪದ ದೀಪ ಬೆಳಗಿ. ಇದರಿಂದ ಮನೆಗೆ ತಾಯಿ ಲಕ್ಷ್ಮಿಯ ಆಗಮನವಾಗುತ್ತದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಮನೆ ಧನ-ಧಾನ್ಯ ಮತ್ತು ಸಮೃದ್ಧಿಯಿಂದ ತುಂಬಿ ತುಳುಕುತ್ತದೆ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link