ಹಣದ ರಾಶಿ ಭವಿಷ್ಯ: ನವೆಂಬರ್ ತಿಂಗಳು ಈ 4 ರಾಶಿಯವರಿಗೆ ಅಶುಭವಾಗಿರಬಹುದು, ನೀವೂ ಇದ್ದೀರಾ ನೋಡಿ..?
ಹಣವನ್ನು ಖರ್ಚು ಮಾಡುವಾಗ ಈ ರಾಶಿಯ ಜನರು ಅತ್ಯಂತ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಹಣದ ಕೊರತೆಯನ್ನು ಎದುರಿಸಬೇಕಾಗಬಹುದು. ಶಾಪಿಂಗ್ ಮಾಡುವಾಗ ಜಾಗರೂಕರಾಗಿರಿ. ನಿಮ್ಮ ಸಂಗಾತಿ ಮತ್ತು ಮಕ್ಕಳು ಈ ತಿಂಗಳು ಹೆಚ್ಚು ಖರ್ಚು ಮಾಡಬಹುದು.
ಧನು ರಾಶಿಯವರಿಗೆ ಈ ತಿಂಗಳು ಧನ ಪ್ರಾಪ್ತಿಯಾಗಲಿದೆ. ಆದರೆ ಅದಕ್ಕಿಂತ ಖರ್ಚು ಅಧಿಕವಾಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿಶೇಷವಾಗಿ ಮಹಿಳೆಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಮಿಥುನ ರಾಶಿಯ ಜನರು ಈ ತಿಂಗಳು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಈ ತಿಂಗಳು ನೀವು ಹೆಚ್ಚು ಶಾಪಿಂಗ್ ಮಾಡಬಹುದು ಮತ್ತು ಅಂತಿಮವಾಗಿ ಅದು ನಿಮ್ಮ ಮೇಲೆ ಹೆಚ್ಚಿನ ಹೊರೆಗೆ ಕಾರಣವಾಗಬಹುದು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಬಜೆಟ್ ಹೊಂದಾಣಿಕೆ ಮಾಡಿಕೊಂಡ ನಂತರವೇ ಹಣವನ್ನು ಖರ್ಚು ಮಾಡಿ.
ಬುಧ ಮತ್ತು ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಈ ತಿಂಗಳಲ್ಲಿ ಅನಿರೀಕ್ಷಿತ ಖರ್ಚುಗಳನ್ನು ಎದುರಿಸುವಂತೆ ಮಾಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ಆದಷ್ಟು ಈ ತಿಂಗಳು ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ ಅಥವಾ ಕೊಡಬೇಡಿ. ಇದಲ್ಲದೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.
2021ರ ನವೆಂಬರ್ ಆರಂಭದಲ್ಲಿ(ನ.2ರಂದು) ಬುಧವು ತುಲಾ ರಾಶಿಯನ್ನು ಪ್ರವೇಶಿಸುತ್ತದೆ. ನಂತರ ಗ್ರಹಗಳ ರಾಜ ಸೂರ್ಯ 2021ರ ನವೆಂಬರ್ 16 ರಂದು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ಗ್ರಹವು ಬುದ್ಧಿವಂತಿಕೆ ಮತ್ತು ಸಂಪತ್ತಿನ ಗ್ರಹವಾಗಿದೆ. ಅದೇ ಸಮಯದಲ್ಲಿ ಸೂರ್ಯ ಯಶಸ್ಸು ಮತ್ತು ಆರೋಗ್ಯದ ಅಂಶವಾಗಿದೆ. ಇವರೆಡೂ ಈ ನಾಲ್ಕು ರಾಶಿಯ ಜನರಿಗೆ ಹಣಕಾಸಿನ ತೊಂದರೆ ಮತ್ತು ನಷ್ಟ ಸಮಸ್ಯೆಯನ್ನು ತಂದೊಡ್ಡಬಹುದು.