Money Indications: ಮನೆಗೆ ಲಕ್ಷ್ಮೀ ಆಗಮನದ ಶುಭ ಸಂಕೇತವಿದು, ಧನ ಸಂಪತ್ತಿನೊಂದಿಗೆ ಸಿಗಬಹುದು ಅಪಾರ ಯಶಸ್ಸು

Mon, 06 Sep 2021-7:37 pm,

ಕನಸಿನಲ್ಲಿ ಹಾವನ್ನು ನೋಡುವುದು ಸಾಮಾನ್ಯ. ಆದರೆ ಹಾವು ಅದರ ಬಿಲದೊಂದಿಗೆ ಕಂಡರೆ, ಇದನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ. ಇಂಥಹ ಕನಸು ಬಿದ್ದರೆ, ವ್ಯಕ್ತಿ ಇದ್ದಕ್ಕಿದ್ದಂತೆ ಸಾಕಷ್ಟು ಹಣವನ್ನು ಪಡೆಯುತ್ತಾನೆ ಎನ್ನಲಾಗಿದೆ. 

ಕನಸಿನಲ್ಲಿ  ಚಿನ್ನವನ್ನು ನೋಡಿದರೆ, ತಾಯಿ ಲಕ್ಷ್ಮೀಯ ಕೃಪೆ ನಿಮ್ಮ ಮೇಲಿದೆ ಎಂದರ್ಥ. 

ಇನ್ನು ಕನಸಿನಲ್ಲಿ ಜೇನುಗೂಡು ಕಂಡುಬಂದರೆ ಕೂಡಾ ಅದನ್ನು ಶುಭ ಎನ್ನಲಾಗಿದೆ. ಇದು ಹಣ ಬರುವ ಮುನ್ಸೂಚನೆಯಾಗಿರುತ್ತದೆ.  

ಕನಸಿನಲ್ಲಿ ಇಲಿಯನ್ನು ನೋಡಿದರೆ, ಮನೆಯು ಸಂಪತ್ತಿನಿಂದ ತುಂಬಲಿದೆ ಎಂದು ಅರ್ಥವಂತೆ. ನಿಮ್ಮ ಜೀವನದಲ್ಲಿ ಯಾವುದೇ ಭೌತಿಕ ಸಂತೋಷಕ್ಕೆ ಕೊರತೆಯಾಗುವುದಿಲ್ಲ ಎಂಬುದರ ಸಂಕೇತ ಇದಾಗಿರುತ್ತದೆ. 

ಯಾವುದೇ ದೇವರನ್ನು ಕನಸಿನಲ್ಲಿ ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ಯಶಸ್ಸನ್ನು ಪಡೆಯುವ ಮತ್ತು ಸಾಕಷ್ಟು ಹಣವನ್ನು ಪಡೆಯುವ ಸಂಕೇತವಾಗಿರುತ್ತದೆ. 

 ಕನಸಿನಲ್ಲಿ ಉರಿಯುತ್ತಿರುವ ದೀಪ ಕಂಡರೆ ಮುಂಬರುವ ದಿನಗಳಲ್ಲಿ ವ್ಯಕ್ತಿ ಅಪಾರ ಸಂಪತ್ತನ್ನು ಪಡೆಯುತ್ತಾನೆ ಎನ್ನುವ ಸಂಕೇತವಾಗಿರುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link