Money Tips After Marriage: ಮದುವೆ ಬಳಿಕ ಸುಖ-ಸಂಸಾರಕ್ಕಾಗಿ ಹೀಗಿರಲಿ ಹಣದ ನಿರ್ವಹಣೆ

Tue, 18 Jun 2024-11:53 am,

ಮದುವೆ ಎಂಬುದು ಗಂಡು-ಹೆಣ್ಣು ಇಬ್ಬರಿಗೂ ಹೊಸ ತಿರುವನ್ನು ನೀಡುವ ಜೀವನದ ಪ್ರಮುಖ ಘಟ್ಟ. ಈ ಸಂದರ್ಭದಲ್ಲಿ ಸಾಕಷ್ಟು ಮುಜುಗರ, ಆತಂಕ, ಉದ್ವಿಗತೆ ಎಲ್ಲವೂ ಇರುತ್ತದೆ. ಇದರೊಂದಿಗೆ ಆರ್ಥಿಕ ಸಂಕಷ್ಟವೂ ಎದುರಾಗಬಹುದು. 

ವಾಸ್ತವವಾಗಿ, ಮದುವೆ ಬಳಿಕ ಆರ್ಥಿಕ ಸಂಕಷ್ಟಗಳು ಎದುರಾಗಲು ನಾನಾ ಕಾರಣಗಳಿರಬಹುದು. ಅವುಗಳಲ್ಲಿ ಮದುವೆಯ ವೆಚ್ಚ, ಹನಿಮೂನ್ ವೆಚ್ಚಗಳು, ಜವಾಬ್ದಾರಿ ಹೆಗಲೇರುವುದು. ಹಣಕಾಸಿನ ಯೋಜನೆಯ ಬಗೆಗಿನ ಕೊರತೆ ಇವೆಲ್ಲವೂ ಕಾರಣವಿರಬಹುದು. 

ಮದುವೆ ನಂತರ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇದನ್ನು ನಿಭಾಯಿಸಲು ಬುದ್ದಿವಂತಿಕೆಯಿಂದ ಹಣಕಾಸಿನ ನಿರ್ವಹಣೆ ಮಾಡುವುದು ಅಗತ್ಯ. ಇದು ನಿಮ್ಮ ಸುಖ-ಸಂಸಾರಕ್ಕೆ ಬುನಾದಿ ಇದ್ದಂತೆ ಎಂದರೂ ತಪ್ಪಾಗಲಾರದು. ಅಂತಹ ಕೆಲವು ಸಲಹೆಗಳೆಂದರೆ... 

ನೀವು ಒಂಟಿಯಾಗಿದ್ದಾಗ ಕೈಯಲ್ಲಿ ದುಡ್ಡಿದ್ದಾಗ ಐಷಾರಾಮಿಯಾಗಿ ಬದುಕಿ, ಕೈ ಖಾಲಿ ಇದ್ದಾಗ ಹೇಗೋ ಜೀವನ ಸಾಗಿಸಿರಬಹುದು. ಆದರೆ, ಮದುವೆಯಾದ ಬಳಿಕ ನೀವು ನಿಮ್ಮ ಸಂಗಾತಿಯ ಜವಾಬ್ದಾರಿಯನ್ನೂ ಹೊರಬೇಕಾಗಿದ್ದು, ಯೋಜಿಸಿ ಹಣ ವ್ಯಯಿಸಿ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತು. 

ಮದುವೆಯ ಬಳಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಸ್ತುತ ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕುವುದಷ್ಟೇ ಅಲ್ಲ, ಭವಿಷ್ಯದಲ್ಲಿ ಬರಬಹುದಾದ ದೊಡ್ಡ ದೊಡ್ಡ ಖರ್ಚುಗಳನ್ನು ನಿರ್ವಹಿಸಲು ಶಕ್ತರಾಗುವಂತೆ ಉಳಿತಾಯ, ಹೂಡಿಕೆಯತ್ತ ಗಮನಹರಿಸಿ. 

ಮನುಷ್ಯ ಸಾಲ ಮಾಡದೆ ಬದುಕಲು ಸಾಧ್ಯವೇ ಇಲ್ಲ. ಆದರೆ, ಅನಿವಾರ್ಯವಿದ್ದಾಗ ಮಾತ್ರವೇ ಸಾಲ ತೆಗೆದುಕೊಳ್ಳಿ. ಅಷ್ಟೇ ಅಲ್ಲ, ಸಾಲ ಕೊಳ್ಳುವಾಗ ಅದನ್ನು ಯಾವಾಗ ಮರುಪಾವತಿ ಮಾಡಬಹುದು ಎಂದು ಲೆಕ್ಕಾಹಾಕಿ ಮುಂದುವರೆಯಿರಿ. 

ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ನಿಮ್ಮಿಬ್ಬರ ಆದಾಯ, ಮಾಸಿಕ ವೆಚ್ಚಗಳನ್ನು ಕಳೆದು ತಿಂಗಳಿಗೆ ಎಷ್ಟು ಹಣ ಉಳಿಸಬೇಕು ಎಂಬ ಹಣಕಾಸಿನ ಜವಾಬ್ದಾರಿಗಳನ್ನು ನಿಮ್ಮಲ್ಲಿಯೇ ಹಂಚಿಕೊಳ್ಳಿ. 

ಜೀವನದಲ್ಲಿ ಆಕಸ್ಮಿಕ ಖರ್ಚು-ವೆಚ್ಚಗಳು ಯಾವಾಗ ಬೇಕಾದರೂ ಬರಬಹುದು. ಇಂತಹ ಸಂದರ್ಭಗಳಿಗಾಗಿ ತುರ್ತು ನಿಧಿಯನ್ನು ಸಿದ್ಧವಾಗಿಡಿ. ಇದರಿಂದ ನೀವು ಸಾಲದ ಸುಳಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವುದನ್ನು ತಪ್ಪಿಸಬಹುದು. 

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link