ಈ ರಾಶಿಯವರಿಗೆ ಶುಕ್ರ ದೆಸೆ ಆರಂಭ :ಕಷ್ಟ ಕಳೆದು ಸಿರಿ ಸಂಪತ್ತು ಒಲಿದು ಬರುವ ಪರ್ವ ಕಾಲ ! ಸ್ವಂತ ಮನೆ, ವಾಹನ ಖರೀದಿ ನನಸಾಗುವ ಸಮಯ
ಶುಕ್ರನು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಸಂಕ್ರಮಿಸಿದಾಗ ಅದರ ಶಕ್ತಿ ಮತ್ತು ಗುಣಗಳು ಬದಲಾಗುತ್ತವೆ. ಈ ಬದಲಾವಣೆಯು ಶುಕ್ರ ಗ್ರಹದಿಂದ ಆಳಲ್ಪಡುವ ರಾಶಿ ಮೇಲೆಯೂ ಕಾಣಿಸುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರ ಸೌಂದರ್ಯ, ಸಂಪತ್ತು, ಐಶ್ವರ್ಯ, ವೈಭವ, ಆಕರ್ಷಣೆ, ಪ್ರೀತಿ, ಮದುವೆ, ಕಾಮ ಮತ್ತು ಭೌತಿಕ ಸೌಕರ್ಯಗಳ ಅಧಿಪತಿ. ಅಂದರೆ ಶುಕ್ರ ಸಂಕ್ರಮಣ ಈ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.
ಇದೀಗ ಶುಕ್ರನು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ. ಈ ಮೂಲಕ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶತಭಿಷಾ ನಕ್ಷತ್ರದಲ್ಲಿ ಶುಕ್ರನ ಸಂಕ್ರಮಣವು ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆದಿದೆ.
ಮೇಷರಾಶಿ : ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಹಠಾತ್ ಆರ್ಥಿಕ ಲಾಭವಾಗುವುದು. ಉದ್ಯಮಿಗಳು ಶೀಘ್ರದಲ್ಲೇ ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು. ಹಣಕಾಸಿನ ತೊಂದರೆ ಕಾಡುವುದಿಲ್ಲ.
ಮಿಥುನ ರಾಶಿ: ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ತುಲಾ ರಾಶಿ : ನಿಮ್ಮ ಮೇಲೆ ಶುಕ್ರನ ದಯೆ ಹೆಚ್ಚಾಗಿರುತ್ತದೆ. ವಾಹನ ಅಥವಾ ಮನೆ ಖರೀದಿಸುವ ಕನಸು ಈ ವರ್ಷ ನನಸಾಗಬಹುದು. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದು.
ಧನು ರಾಶಿ :ನಿಮ್ಮ ಬದುಕಿನಲ್ಲಿ ಕಷ್ಟದ ದಿನಗಳು ಕಳೆದು ಸುವರ್ಣ ದಿನಗಳು ಬರಲಿವೆ. ನೀವು ಮಾಡುವ ಕೆಲಸಕ್ಕೆ ಹಿರಿಯ ಅಧಿಕಾರಿಗಳ ಮನ್ನಣೆ ಸಿಗಲಿದೆ. ವೃತ್ತಿಯಲ್ಲಿ ಉನತ ಸ್ಥಾನಕ್ಕೆ ಏರುವಿರಿ.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.