ಶುಕ್ರ ದೆಸೆಯಿಂದಲೇ ಈ ರಾಶಿಯವರ ಹೊಸ ವರ್ಷ ಆರಂಭ !ಧನ ಸಂಪತ್ತು ಉಕ್ಕಿ ಬರುವ ವರ್ಷ ! ಮಣ್ಣು ಕೂಡಾ ಹೊನ್ನಾಗುವ ಪರ್ವ ಕಾಲ
ಶುಕ್ರ ಎಂದರೆ ಸಂತೋಷ ಸಮೃದ್ದಿ. ಯಾರ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿ ಇರುತ್ತಾನೆಯೋ ಅವರ ಜೀವನದಲ್ಲಿ ಕಷ್ಟಗಳಿಗೆ ಜಾಗವೇ ಇರುವುದಿಲ್ಲ. ಅವರು ಮಣ್ಣು ಮುಟ್ಟಿದರೂ ಅದು ಹೊನ್ನಾಗಿ ಪರಿವರ್ತನೆಯಾಗುತ್ತದೆ ಎನ್ನುವ ಮಾತಿದೆ.
ಹೊಸ ವರ್ಷದ ಆರಂಭದಲ್ಲಿಯೇ ಶುಕ್ರನು ತನ್ನ ರಾಶಿಯನ್ನು ಬದಲಿಸುತ್ತಾನೆ. ಇದರಿಂದ ಕೆಲವು ರಾಶಿಯವರಿಗೆ ಈ ಹೊಸ ವರ್ಷದ ಆರಂಭದಿಂದಲೇ ಶುಕ್ರ ದೆಸೆ ನಡೆಯುತ್ತದೆ. ಈ ವರ್ಷ ಇವರ ಪಾಲಿಗೆ ಸುವರ್ಣ ವರ್ಷವಾಗಿರಲಿದೆ.
ವೃಷಭ ರಾಶಿ :ಈ ವರ್ಷ ಹಣದ ಕೊರತೆಯೇ ನಿಮ್ಮನ್ನು ಕಾಡುವುದಿಲ್ಲ. ನಿಮಗೆ ತಿಳಿಯದ ಮೂಲದಿಂದಲೂ ಹಣ ಬಂದು ನಿಮ್ಮ ಕೈ ಸೇರುತ್ತದೆ. ಕಷ್ಟಗಳು ಕೊನೆಯಾಗುವುದು. ಸಾಲಗಳೆಲ್ಲಾ ತೀರಿ ನೆಮ್ಮದಿ ಜೀವನ ನಡೆಸುವಿರಿ.
ಕುಂಭ ರಾಶಿ :ಹೊಸ ವರ್ಷದಲ್ಲಿ ಶುಕ್ರನ ವಿಶೇಷ ಅನುಗ್ರಹ ನಿಮ್ಮ ಮೇಲಿರಲಿದೆ. ಇಡುವ ಹೆಜ್ಜೆ ಯಶಸ್ಸಿನತ್ತಲೇ ಸಾಗುವುದು. ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಖಂಡಿತಾ. ವಿದ್ಯಾರ್ಥಿಗಳ ಪಾಲಿಗೆ ಈ ವರ್ಷ ಅತ್ಯಂತ ಲಕ್ಕಿ.
ಮೀನ ರಾಶಿ :ನಿಮ್ಮ ಮಾತಿಗೆ ಎಲ್ಲಾ ಕಡೆ ಪಾಧನ್ಯತೆ ಸಿಗುವ ವರ್ಷ. ನಿಮ್ಮ ಗೌರವ ಹೆಚ್ಚಾಗುವುದು. ಅದೃಷ್ಟ ಲಕ್ಷ್ಮೀ ನಿಮ್ಮ ಜೊತೆಗಿರುವ ವರ್ಷ ಇದು. ಹಾಗಾಗಿ ಏನಾದರೂ ಹೊಸ ಯೋಜನೆ ಇದ್ದಲ್ಲಿ ಕಾರ್ಯ ರೂಪಕ್ಕೆ ತನ್ನಿ.
ಸೂಚನೆ :ಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.