ಹೊಸ ವರ್ಷದ ಮೊದಲ ವಾರದಲ್ಲಿಯೇ ಧನಯೋಗ !ಈ ರಾಶಿಯವರಿಗೆ ಸ್ವಂತ ಮನೆ ಖರೀದಿ ಭಾಗ್ಯ! ಉನ್ನತ ಸ್ಥಾನಕ್ಕೂ ಏರುವ ಯೋಗ
ಚಂದ್ರನು ಮಕರ ರಾಶಿಯನ್ನು ಪ್ರವೇಶಿಸುವುದರೊಂದಿಗೆ ಅತ್ಯಂತ ಮಂಗಳಕರ ಎನಿಸುವ ಧನಯೋಗ ಸೃಷ್ಟಿಯಾಗಲಿದೆ. ಇದರಿಂದ ನಾಲ್ಕು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ.
ಧನು ರಾಶಿ :2025ರ ಮೊದಲ ವಾರವೇ ಧನು ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ. ಹೊರಗೆ ಉಳಿದಿರುವ ಹಣ ಮರಳಿ ನಿಮ್ಮ ಕೈ ಸೇರುವುದು. ಸಾಲದಿಂದ ಸಂಪೂರ್ಣ ಮುಕ್ತಿ ಸಿಗುವುದು. ಈ ವರ್ಷದಿಂದ ನಿಮ್ಮ ಜೀವನದಲ್ಲಿ ಹಣಕಾಸಿನ ಕೊರತೆ ಕಾಡುವುದೇ ಇಲ್ಲ.
ಕನ್ಯಾ ರಾಶಿ :ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.
ವೃಷಭ ರಾಶಿ :ಹೊಸ ವರ್ಷದಿಂದ ಎಲ್ಲವೂ ಶುಭವಾಗಲಿದೆ. ಪ್ರತಿ ಹಂತದಲ್ಲಿಯೂ ಯಶಸ್ಸು ಸಿಗುವುದು. ಮನೆ, ವಾಹನ ಖರೀದಿ ಭಾಗ್ಯ ಒದಗಿ ಬರುವುದು.
ವೃಶ್ಚಿಕ ರಾಶಿ :ಹೊಸ ವರ್ಷದ ಮೊದಲ ವಾರ ನಿಮಗೆ ತುಂಬಾ ಅದ್ಭುತವಾಗಿರುತ್ತದೆ.ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉನ್ನತ ಸ್ಥಾನಕ್ಕೆ ಏರುವಿರಿ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.