ಈ ರಾಶಿಯವರನ್ನು 19 ವರ್ಷ ನಿರಂತರ ಹರಸುವನು ಶನಿ ಮಹಾತ್ಮ ! ಶನಿ ದೇವನ ಕೃಪೆಯಿಂದಲೇ ಪ್ರಾಪ್ತಿಯಾಗುವುದು ಅಷ್ಟೈಶ್ವರ್ಯ! ಒಲಿದು ಬರುವುದು ಕಾರು, ಬಂಗಲೆ ಖರೀದಿ ಯೋಗ !
)
ಶನಿ ಮಹಾದೆಸೆ ಬರೋಬ್ಬರಿ 19 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರು ಮಣ್ಣು ಮುಟ್ಟಿದರೂ ಚಿನ್ನ ಆಗುವುದು. ಮನೆ, ವಾಹನ ಖರೀದಿ ಯೋಗ ಇದೇ ಅವಧಿಯಲ್ಲಿ ಒದಗಿ ಬರುವುದು. ಶನಿ ದೇವನ ಕೃಪೆ ಹೆಜ್ಜೆ ಹೆಜ್ಜೆಗೂ ಇವರ ಮೇಲಿರುವುದು.
)
ಕಟಕ ರಾಶಿ - ಶನಿಮಹಾ ದೆಸೆಯಿಂದಲೇ ನಿಮ್ಮ ಬಾಳು ಬೆಳಗುವುದು. ಶನಿ ಮಹಾತ್ಮ ನಿಮ್ಮನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲುವಂತೆ ಮಾಡುತ್ತಾನೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಅತಿ ಸಣ್ಣ ವಯಸ್ಸಿನಲ್ಲಿಯೇ ಉನ್ನತ ಹುದ್ದೆಗೆ ಏರುವಿರಿ.
)
ಮಕರ ರಾಶಿ - ನಿಮ್ಮ ಅಧ್ಪತಿ ರಾಶಿಯೂ ಶನಿದೇವನೆ. ಹಾಗಾಗಿ ನಿಮ್ಮ ಮೇಲೆ ಶನಿದೆವನ ಕೃಪೆ ಹೆಚ್ಚಾಗಿ ಇರುತ್ತದೆ. ಶನಿ ದೆಸೆಯ ಕಾಲದಲ್ಲಿಯೂ ನಿಮ್ಮನ್ನು ಶನಿ ಮಹಾತ್ಮ ಅಷ್ಟಾಗಿ ಕಾಡುವುದಿಲ್ಲ. ಬದಲಾಗಿ ನೀವು ಏಳಿಗೆ ಕಾಣುತ್ತಲೇ ಹೋಗುವಿರಿ.
ವೃಶ್ಚಿಕ ರಾಶಿ - ಹಣಕಾಸಿನ ವಿಷಯದಲ್ಲಿ ನಿಮಗೆ ಸೋಲಿಲ್ಲ. ನಿಮ್ಮ ಕೈ ಯಾವತ್ತೂ ಖಾಲಿಯಾಗುವುದಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಿಟ್ಟರೆ ನಿಮ್ಮದು ಕೂಡಾ ಐಶಾರಾಮದ ಜೀವನವೇ.
ಕುಂಭ ರಾಶಿ - ನಿಮ್ಮ ಅಧಿಪತಿಯೂ ಶನಿ ಮಹಾತ್ಮನೇ. ನಿಮ್ಮ ಜಾತಕದಲ್ಲಿಯೂ ಶನಿ ದೆಸೆ ನಡೆಯುತ್ತಿದೆ. ಆದರೆ ಅದರ ಶುಭ ಫಲವನ್ನೇ ನೀವು ಅನುಭವಿಸುತ್ತೀರಿ. ನಿಮ್ಮನ್ನು ಸೋಲುವುದಕ್ಕೆ ಶನಿ ದೇವನೇ ಬಿಡುವುದಿಲ್ಲ. ಸದಾ ನಿಮ್ಮ ಬೆನ್ನ ಹಿಂದೆ ನಿಂತು ಕಾಯುತ್ತಾನೆ. ನಿಮ್ಮ ಜೀವನದಲ್ಲಿ ಕಷ್ಟ ಎನ್ನುವುದು ಕಡಿಮೆ. ಸಿರಿ ಸಂಪತ್ತಿನ ಒಡೆಯ ನೀವು.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.