30 ವರ್ಷಗಳ ಬಳಿಕ ಶ್ರಾವಣದಲ್ಲಿ ಅಪರೂಪದ ಯೋಗ ! ಶಿವ ಮತ್ತು ಶನಿಯ ದಯೆಯಿಂದ ಈ ರಾಶಿಯವರದ್ದೇ ಮೇಲುಗೈ
ಅಪರೂಪದ ಯೋಗ : ಶ್ರಾವಣ ಮಾಸವನ್ನು ಮಂಗಳಕರ ಮತ್ತು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಈ ಬಾರಿ ಶ್ರಾವಣದಲ್ಲಿ ಅಧಿಕ ದಿನಗಳು ಬರಲಿವೆ. ಹಾಗಾಗಿ ಇದನ್ನು ಅಧಿಕ ಶ್ರಾವಣ ಎನ್ನಲಾಗುವುದು. ಶ್ರಾವಣದಲ್ಲಿ ಅಧಿಕ ದಿನಗಳನ್ನು ಹೊಂದಿರುವ ಘಟನೆ 19 ವರ್ಷಗಳ ನಂತರ ಮರುಕಳಿಸಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ನಂತರ ಶನಿಯು ಈ ಮಂಗಳಕರ ಅವಧಿಯಲ್ಲಿ ತನ್ನದೇ ಆದ ಕುಂಭ ರಾಶಿಯಲ್ಲಿರುತ್ತಾನೆ. ಇದರಿಂದಾಗಿ ಈ ಅವಧಿಯಲ್ಲಿ ಶಿವ ಮತ್ತು ಶನಿದೇವರ ವಿಶೇಷ ಕೃಪೆ ಒಟ್ಟಿಗೆ ದೊರೆಯಲಿದೆ.
ಈ ಅಪರೂಪದ ಪದ್ಧತಿಯ ಲಾಭವು ಎಲ್ಲಾ ರಾಶಿಯವರ ಜಾತಕದಲ್ಲಿಯೂ ಕಂಡು ಬರುತ್ತದೆ. ಅದರಲ್ಲಿಯೂ 4 ರಾಶಿಯವರಿಗೆ ಶನಿಯು 59 ದಿನಗಳವರೆಗೆ ವಿಶೇಷವಾಗಿ ಹರಸುತ್ತಾನೆ.
ಮೇಷ: ಮೇಷ ರಾಶಿಯವರಿಗೆ ಈ 59 ದಿನಗಳು ಅದ್ಭುತವಾಗಿರಲಿವೆ. ಅವರುಮಾಡುವ ಕೆಲಸ ಮತ್ತು ವ್ಯವಹಾರದಲ್ಲಿ ಬಲವಾದ ಯಶಸ್ಸನ್ನು ಪಡೆಯಬಹುದು. ಬಡ್ತಿ ಸಿಕ್ಕಿ ವೇತನ ಹೆಚ್ಚಳವಾಗಲಿದೆ. ಆಗಸ್ಟ್ 31 ರವರೆಗಿನ ಅವಧಿಯು ಗೌರವ ಮತ್ತು ಪ್ರಗತಿಯಿಂದ ತುಂಬಿರುತ್ತದೆ. ಅವಿವಾಹಿತರ ವಿವಾಹ ನಿಶ್ಚಯವಾಗಲಿದೆ.
ಮಿಥುನ: ಈ ಅವಧಿಯು ಮಿಥುನ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ವೃತ್ತಿಯಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಲಾಭ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಮಕ್ಕಳು ಪ್ರಗತಿ ಹೊಂದುತ್ತಾರೆ. ಅವಿವಾಹಿತರ ವಿವಾಹ ನಿಶ್ಚಯವಾಗಲಿದೆ.
ಸಿಂಹ: ಸಿಂಹ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನೀವು ಶನಿ ಮತ್ತು ಶಿವನ ಪರಿಪೂರ್ಣ ಅನುಗ್ರಹವನ್ನು ಪಡೆಯುತ್ತೀರಿ. ಜೀವನದಲ್ಲಿ ಸಂತೋಷಗಳು ಹೆಚ್ಚಾಗುತ್ತವೆ. ಹೊಸ ಉದ್ಯೋಗಗಳನ್ನು ಪ್ರಾರಂಭಿಸಿ. ವೈವಾಹಿಕ ಜೀವನದಲ್ಲಿನ ಒತ್ತಡ ದೂರವಾಗುತ್ತದೆ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಶನಿದೇವನ ಆಶೀರ್ವಾದ ತುಸು ಹೆಚ್ಚೇ ಇರಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಕೆಲಸ ಸಿಗುತ್ತದೆ. ಅಪೇಕ್ಷಿತ ವರ್ಗಾವಣೆ, ಬಡ್ತಿ ಲಭ್ಯ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು.