ಹಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದೀರಾ? ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆಯಿರಿ

Wed, 09 Mar 2022-2:01 pm,

ಹರಿದ ಪರ್ಸ್ ಅನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ. (ಎಲ್ಲಾ ಫೋಟೋಗಳು ಸಾಂದರ್ಭಿಕ ಫೋಟೋಗಳಷ್ಟೇ) 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಶಾರ್ಪ್ ಅಥವಾ ಚೂಪಾದ ವಸ್ತುಗಳು ಅಥವಾ ಲೋಹದ ವಸ್ತುಗಳನ್ನು ಎಂದಿಗೂ ಪರ್ಸ್‌ನಲ್ಲಿ ಇಡಬೇಡಿ. ಅದು ನಕಾರಾತ್ಮಕತೆಯನ್ನು ತರುತ್ತದೆ, ಮಾತ್ರವಲ್ಲ ಹಣದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎನ್ನಲಾಗುವುದು. 

ಅನೇಕ ಜನರು ತಮ್ಮ ಮೃತ ಸಂಬಂಧಿಕರ ಫೋಟೋಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದರ ಹಿಂದೆ ಅವರಿಗೆ ಭಾವನಾತ್ಮಕ ಬಾಂಧವ್ಯವಿರುತ್ತದೆ. ಆದರೆ ಸತ್ತವರ ಫೋಟೋವನ್ನು ಪರ್ಸ್‌ನಲ್ಲಿ ಇಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಈ ಕಾರಣದಿಂದಾಗಿ, ಅಂತಹ ಜನರ ಬಳಿ ಯಾವಾಗಲೂ ಹಣದ ಕೊರತೆ ಇರುತ್ತದೆ ಎಂದೂ ಸಹ ಹೇಳಲಾಗುತ್ತದೆ.

ಅನೇಕ ಜನರು ತಮ್ಮ ಪರ್ಸ್‌ನಲ್ಲಿ ಹಳೆಯ ಬಿಲ್-ರಶೀದಿಗಳ ಬಂಡಲ್ ಅನ್ನು ಇಡುವ ಅಭ್ಯಾಸ ಹೊಂದಿರುತ್ತಾರೆ. ಅವರ ಈ ಅಭ್ಯಾಸವು ಹಣದ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ ಈ ವಸ್ತುಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ. 

ಅನೇಕ ಜನರು ಪರ್ಸ್‌ನಲ್ಲಿ ದೇವರ ಫೋಟೋವನ್ನು ಇಟ್ಟುಕೊಳ್ಳುತ್ತಾರೆ ಅಥವಾ ದೇವರ ಫೋಟೋ ಇರುವಂತಹ ಯಾವುದೇ ಕಾಗದವನ್ನು ಇಟ್ಟುಕೊಳ್ಳುತ್ತಾರೆ. ಅವರ ಈ ತಪ್ಪು ಅವರನ್ನು ಸಾಲದ ಹೊರೆಯಲ್ಲಿ ಸಿಲುಕಿಸುತ್ತಲೇ ಇರುತ್ತದೆ. ನೀವು ಸಾಲವನ್ನು ತಪ್ಪಿಸಲು ಬಯಸಿದರೆ, ಪರ್ಸ್‌ನಲ್ಲಿ ಎಂದೂ ಸಹ ದೇವರ ಫೋಟೋ ಇಡಬೇಡಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link