Money Tips: ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಏನು ಮಾಡಬೇಕು? ಶುಭವೋ ಅಥವಾ ಅಶುಭವೋ?
ಅನೇಕರಿಗೆ ರಸ್ತೆಯಲ್ಲಿ ನಾಣ್ಯ ಮತ್ತು ನೋಟುಗಳು ಸಿಗುತ್ತವೆ. ರಸ್ತೆಯಲ್ಲಿ ಹೋಗುವಾಗ ಈ ರೀತಿ ಹಣ ಸಿಕ್ಕರೆ ಅದೃಷ್ಟ ಕೈಹಿಡಿಯುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ರಸ್ತೆಯಲ್ಲಿ ಸಿಕ್ಕ ಹಣವನ್ನು ತಂದು ಮನೆಯಲ್ಲಿ ಇರಿಸುವಂತಿಲ್ಲ. ಇದಲ್ಲದೇ ಸಿಕ್ಕ ನಾಣ್ಯ ಮತ್ತು ನೋಟುಗಳನ್ನು ಖರ್ಚು ಸಹ ಮಾಡಬಾರದಂತೆ. ಹಾಗಾದ್ರೆ ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನು ಮನೆಗೆ ತಂದು ಅರಿಷಿನದ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ದೇವರಕೊಣೆಯಲ್ಲಿ ಒಂದು ಚಿಕ್ಕ ಬೌಲ್‌ನಲ್ಲಿ ಅಕ್ಕಿ ಇರಿಸಿ ಅದರ ಮೇಲೆ ಈ ನಾಣ್ಯವನ್ನಿರಿಸಬೇಕು. ಬಳಿಕ ಅದರ ಮೇಲೆ ಅರಿಶಿನ-ಕುಂಕುಮ ಹಚ್ಚಬೇಕು.
ಹೀಗೆ ಮಾಡುವುದರಿಂದ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಲಾಗಿದೆ. ಹೀಗೆ ರಸ್ತೆಯಲ್ಲಿ ಹಣ ಸಿಗುವುದು ನಿಮ್ಮ ಅದೃಷ್ಟ ಖುಲಾಯಿಸುವ ಸೂಚನೆಯಂತೆ. ಇದು ನಿಮಗೆ ಹೆಚ್ಚು ಹಣ ಸಿಗುವ ಬಗ್ಗೆ ಸೂಚನೆ ನೀಡುತ್ತದೆ. ಹೀಗಾಗಿ ರಸ್ತೆಯಲ್ಲಿ ಸಿಕ್ಕ ಹಣವನ್ನು ಖರ್ಚು ಮಾಡುವುದಾಗಲಿ ಅಥವಾ ದೇವಸ್ಥಾನದ ಹುಂಡಿಗೆ ಹಾಕುವ ಬದಲು ನಿಮ್ಮ ಮಅಂದಹಾಗೆ ಕೆಲವರು ಮಾಟ-ಮಂತ್ರದ ಸಂದರ್ಭದಲ್ಲಿ ನಿಂಬೆಹಣ್ಣು, ಅರಿಷಿನ-ಕುಂಕುಮ ಇನ್ನಿತರ ವಸ್ತುಗಳ ಜೊತೆಗೆ ನಾಣ್ಯ ಮತ್ತು ನೋಟುಗಳನ್ನು ಇಟ್ಟಿರುತ್ತಾರೆ. ಇವುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬಾರದು. ಆದರೆ ದಾರಿಯಲ್ಲಿ ಬರೀ ನಾಣ್ಯವಷ್ಟೇ ಸಿಕ್ಕರೆ ಮನೆಗೆ ತರಬೇಕು. ಹೀಗೆ ತಂದ ನಾಣ್ಯವನ್ನು ಪ್ರತಿ ಶುಕ್ರವಾರ ಭಕ್ತಿಯಿಂದ ಪೂಜೆ ಮಾಡಬೇಕು.
ಅಂದಹಾಗೆ ಕೆಲವರು ಮಾಟ-ಮಂತ್ರದ ಸಂದರ್ಭದಲ್ಲಿ ನಿಂಬೆಹಣ್ಣು, ಅರಿಷಿನ-ಕುಂಕುಮ ಇನ್ನಿತರ ವಸ್ತುಗಳ ಜೊತೆಗೆ ನಾಣ್ಯ ಮತ್ತು ನೋಟುಗಳನ್ನು ಇಟ್ಟಿರುತ್ತಾರೆ. ಇವುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬಾರದು. ಆದರೆ ದಾರಿಯಲ್ಲಿ ಬರೀ ನಾಣ್ಯವಷ್ಟೇ ಸಿಕ್ಕರೆ ಮನೆಗೆ ತರಬೇಕು. ಹೀಗೆ ತಂದ ನಾಣ್ಯವನ್ನು ಪ್ರತಿ ಶುಕ್ರವಾರ ಭಕ್ತಿಯಿಂದ ಪೂಜೆ ಮಾಡಬೇಕು.
ನನಗೆ ನಾಣ್ಯ ಸಿಕ್ಕಿಲ್ಲ ನೋಟು ಅಷ್ಟೇ ಸಿಕ್ಕಿದೆ ಏನು ಮಾಡಬೇಕು ಅನ್ನೋ ಪ್ರಶ್ನೆ ಕೆಲವರಿಗೆ ಇರುತ್ತದೆ. ನೋಟು ಕೂಡ ತಾಯಿ ಲಕ್ಷ್ಮೀದೇವಿ ಮನೆಗೆ ಬರುವ ಸೂಚನೆಯನ್ನು ನೀಡುತ್ತದೆ. ಹೀಗಾಗಿ ಅದನ್ನು ಮನೆಗೆ ತಂದು ಅದರ ಮೇಲೆ ಕೊಂಚ ನೀರು ಚುಮುಕಿಸಿ ದೇವರ ಕೋಣೆಯಲ್ಲಿಟ್ಟು ಪೂಜಿಸಬೇಕು. ಇದರಿಂದ ಕೆಲವೇ ದಿನಗಳಲ್ಲಿ ಅದೃಷ್ಟ ನಿಮ್ಮದಾಗುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)