ನಾಲ್ಕು ರಾಶಿಯಲ್ಲಿ ರಾಜಯೋಗ ! ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ, ಕೈ ತುಂಬಾ ಸದ್ದು ಮಾಡುವುದು ಕಾಂಚಾಣ
ಜ್ಯೋತಿಷ್ಯದಲ್ಲಿ, ಬುಧಾದಿತ್ಯ ರಾಜಯೋಗವು ಯಶಸ್ಸು, ಗೌರವ, ಸಂಪತ್ತು ಮತ್ತು ಖ್ಯಾತಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಸೂರ್ಯನು ವೃಷಭ ರಾಶಿಯಲ್ಲಿ ಇರುವವರೆಗೂ, ಈ ಬುಧಾದಿತ್ಯ ಯೋಗ ಇರುತ್ತದೆ. ಬುಧಾದಿತ್ಯ ಯೋಗ ಎಲ್ಲಾ ರಾಶಿಯವರಿಗೆ ಫಲಪ್ರದವಾಗದಿದ್ದರೂ, 4 ರಾಶಿಯವರ ಭಾಗ್ಯವನ್ನು ಮಾತ್ರ ಅತಿಯಾಗಿ ಬೆಳಗಲಿದೆ.
ವೃಷಭ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ಯೋಗದಿಂದಾಗಿ ನಾಲ್ಕು ರಾಶಿಯವರ ಮುಂದಿನ ದಿನಗಳು ಶುಭಕರವಾಗಿರುತ್ತದೆ. ಈ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಯಶಸ್ಸು, ಸಂಪತ್ತು ಮತ್ತು ಖ್ಯಾತಿ ಹುಡುಕಿಕೊಂಡು ಬರುತ್ತದೆ.
ವೃಷಭ ರಾಶಿ : ಸೂರ್ಯ ಮತ್ತು ಬುಧ ಸಂಕ್ರಮಣದಿಂದ ಬುಧಾದಿತ್ಯ ಯೋಗವು ವೃಷಭ ರಾಶಿಯವರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹುದ್ದೆ ಮತ್ತು ಜವಾಬ್ದಾರಿ ಹೆಚ್ಚಾಗಬಹುದು. ಯಶಸ್ಸು ಒಂದರ ಹಿಂದೆ ಒಂದರಂತೆ ಬರುತ್ತದೆ. ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಲಾಭವಾಗುವುದು
ಮಿಥುನ ರಾಶಿ : ಬುಧನು ಮಿಥುನ ರಾಶಿಯ ಅಧಿಪತಿಯಾಗಿದ್ದು, ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಈ ರಾಶಿಯವರು ವಿದೇಶದಿಂದ ಲಾಭ ಪಡೆಯುತ್ತಾರೆ. ಈ ಹೊತ್ತಿನಲ್ಲಿ ಎಲ್ಲಾ ಕೆಲಸಗಳಲ್ಲಿಯೂ ಲಾಭವೇ ಆಗುವುದು. ಹಾಗಾಗಿ ಯಾವುದೇ ಕೆಲಸ ಮಾಬೇಕಾದರೆ ಅಂಜಿಕೆ ಅಳುಕಿಲ್ಲದೆ ಆರಂಭಿಸಬಹುದು. ಯಾಕೆಂದರೆ ಈ ಸಮಯದಲ್ಲಿ ನಿಮಗೆ ಸೋಲುವ ಭಯ ಇರುವುದಿಲ್ಲ.
ಕರ್ಕಾಟಕ ರಾಶಿ : ಬುಧಾದಿತ್ಯ ಯೋಗವು ಕರ್ಕ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸೂರ್ಯ-ಬುಧ ಸಂಯೋಗದಿಂದ ಈ ರಾಶಿಯವರಿಗೆ ಸಂಪತ್ತಿನ ಯೋಗವನ್ನು ಉಂಟುಮಾಡುತ್ತದೆ. ಆದಾಯ ಹೆಚ್ಚಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ.
ಕುಂಭ ರಾಶಿ : ಬುಧಾದಿತ್ಯ ಯೋಗವು ಕುಂಭ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗಲಿದೆ. ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ಮುಟ್ಟುತ್ತಾರೆ. ಹೆಚ್ಚಿನ ಲಾಭಗಳನ್ನು ಪಡೆಯುತ್ತಾರೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)