ಮೂರು ರಾಶಿಯಲ್ಲಿ ಗಜ ಲಕ್ಷ್ಮೀ ರಾಜಯೋಗ ! ಇಂದಿನಿಂದಲೇ ಹೆಚ್ಚಾಗುವುದು ಸಂಪತ್ತು ಸಮೃದ್ದಿ

Mon, 07 Aug 2023-11:23 am,

ವೈದಿಕ ಜ್ಯೋತಿಷ್ಯದ ಪ್ರಕಾರ ಇಂದು ಬೆಳಿಗ್ಗೆ 10.37ಕ್ಕೆ  ಶುಕ್ರ ರಾಶಿ ತನ್ನ ರಾಶಿಯನ್ನು ಬದಲಿಸಿದೆ. ಈಗಾಗಲೇ ಹಿಮ್ಮಖ ಚಲನೆ ಆರಂಭಿಸಿರುವ ಶುಕ್ರನಿಂದ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಇದು 4 ರಾಶಿಯವರಿಗೆ ಅಪಾರ ಸಂಪತ್ತನ್ನು ನೀಡುತ್ತದೆ.  

ಗಜಲಕ್ಷ್ಮಿ ಯೋಗ ಪರಿಣಾಮ  : ಈ  ಯೋಗದಿಂದ ವ್ಯಕ್ತಿ ಸುಖ, ಶಾಂತಿ, ಸಮೃದ್ದಿ ಮತ್ತು ಐಶಾರಾಮಿ ಜೀವನವನ್ನು ಅನುಭವಿಸುತ್ತಾನೆ. ಗಜ ಲಕ್ಷ್ಮೀ ರಾಜ ಯೋಗದ ಪರಿಣಾಮ, ಮೂರು ರಾಶಿಯವರು ಅಪಾರ ಸಂಪತ್ತು, ಯಶಸ್ಸು, ಖ್ಯಾತಿ ಮತ್ತು ಅದೃಷ್ಟವನ್ನು  ಪಡೆಯುತ್ತಾರೆ. 

ಮಿಥುನ ರಾಶಿ :  ಶುಕ್ರನು ನಿಮ್ಮ ಸಂಪತ್ತಿನ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಣವನ್ನು ಉಳಿಸುವುದು ಸಾಧ್ಯವಾಗುತ್ತದೆ. ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣ ಮತ್ತು ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅದ್ಭುತವಾಗಿರುತ್ತದೆ. 

ಕನ್ಯಾ ರಾಶಿ  : ಕನ್ಯಾ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗದಿಂದ   ಲಾಭವಾಗಲಿದೆ. ನಿಮ್ಮ ಆದಾಯದ ಮನೆಯಲ್ಲಿ ಶುಕ್ರ ಗ್ರಹವು ಹಿಮ್ಮುಖವಾಗಿದೆ. ಬಹಳ ದಿನಗಳಿಂದ ಹೊರಗುಳಿದಿದ್ದ ಹಣ ಕೈ ಸೇರುವುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಮಕ್ಕಳು ತಮ್ಮ ಪ್ರಗತಿ ಮತ್ತು ಯಶಸ್ಸಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನಿಮಗೆ ತರಬಹುದು.

ತುಲಾ ರಾಶಿ : ಗಜಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಶುಕ್ರನ ಹಿಮ್ಮುಖ ಚಲನೆಯಿಂದ ನಿಮ್ಮ ವ್ಯಾಪಾರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಯೋಜನೆಗಳೆಲ್ಲವೂ ಯಶಸ್ವಿಯಾಗುತ್ತದೆ. ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಮಧುರವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿಯ ಅವಕಾಶಗಳು ದೊರೆಯಲಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link