ಈ ರಾಶಿಯವರನ್ನು ಮನಸಾರೆ ಹರಸುವಳು ಧನಲಕ್ಷ್ಮೀ ! ನೆಟ್ಟ ಗುರಿ, ಇಟ್ಟ ಹೆಜ್ಜೆ ಎಲ್ಲದರಲ್ಲೂ ಗೆಲುವು!

Wed, 06 Sep 2023-10:35 am,

ಗ್ರಹಗಳ ಚಲನೆಯಲ್ಲಿನ ಈ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಗೋಚರಿಸುತ್ತದೆ. ಇವುಗಳಲ್ಲಿ, 4 ರಾಶಿಯವರ ಜೀವನದಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ. 

ಯಾರ ಮೇಲೆ ಪರಿಣಾಮ : ಈ ಸಮಯದಲ್ಲಿ, ನಾಲ್ಕು ರಾಶಿಯವರು ಏನೇ ಕೆಲಸ ಮಾಡಿದರೂ ಜಯ ಖಂಡಿತಾ. ಎಷ್ಟೇ ಕಷ್ಟಕರ ಕೆಲಸಕ್ಕೆ ಕೈ ಹಾಕಿದರೂ ಗೆಲುವು ನಿಮ್ಮದಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.   

ತುಲಾ ರಾಶಿ : ಸೆಪ್ಟೆಂಬರ್ ತಿಂಗಳು ತುಲಾ ರಾಶಿಯವರಿಗೆ ವೃತ್ತಿಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿರುವವರು ತಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಬಹುದು.

ಮೇಷ ರಾಶಿ : ಸೆಪ್ಟೆಂಬರ್ 2023 ರ ಜಾತಕವು ಈ ರಾಶಿಯವರಿಗೆ ಅದೃಷ್ಟವನ್ನೇ ಹೊತ್ತು ತಂದಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಒಂಟಿ ಜನರಿಗೆ ಮದುವೆ ಪ್ರಸ್ತಾಪಗಳು ಬರಬಹುದು. ಶತ್ರುಗಳು ನಿಮ್ಮ ವಿರುದ್ಧ ಏನೇ ಪಿತೂರಿ ಮಾಡಿದರೂ ನೀವು ಅವರಿಗಿಂತ ಶ್ರೇಷ್ಠ ಎನ್ನುವುದು ಸಾಬೀತಾಗುತ್ತದೆ. ಗುರುವಿನ ಶುಭ ಪ್ರಭಾವವು ನಿಮ್ಮ ಎಲ್ಲಾ ಕೆಲಸವನ್ನು  ಯಶಸ್ವಿಗೊಳಿಸುತ್ತದೆ.   

ಮಕರ ರಾಶಿ : ಅನೇಕ ವೈಯಕ್ತಿಕ ಸಾಧನೆಗಳನ್ನು ಸಾಧಿಸುತ್ತಾರೆ. ಮನಸ್ಸು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಸಂಪತ್ತಿನ ಮೂಲವು ಹೆಚ್ಚಾಗುತ್ತದೆ. ಅನೇಕ ಹೊಸ ಆದಾಯದ ಮೂಲಗಳು ಪ್ರಾರಂಭವಾಗಬಹುದು.   

ವೃಷಭ ರಾಶಿ :ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವ ಕಾರಣ ಆದಾಯವು ಹೆಚ್ಚಾಗುತ್ತದೆ.  ಅಗತ್ಯವಿರುವ ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. 

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link