0 ಕ್ಯಾಲೋರಿಸ್‌.. ಸಕ್ಕರೆಯಂತೆ ಸಿಹಿ ಇರುವ ಈ ಹಣ್ಣು, ಮಧುಮೇಹಕ್ಕೆ ರಾಮಬಾಣ..!

Tue, 03 Dec 2024-11:20 am,

Monk fruit: ಸಕ್ಕರೆಯಲ್ಲಿ ಇರುವ ಕ್ಯಾಲೊರಿಗಳು ಹಾಗೂ ಅದರಲ್ಲಿರುವ ಅಂಶಗಳ, ಹಲವಾರು ರೋಗಗಳು ನಮ್ಮ ದೇಹವನ್ನು ಆವರಿಸುವಂತೆ ಮಾಡುತ್ತದೆ. ಆದರೆ, ಇದೀಗ ಮಾರು ಕಟ್ಟೆಯಲ್ಲಿ ಲಭ್ಯವಿರುವ ಈ ಹಣ್ಣು ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಮಾಡದಿರುವುದು ಅಷ್ಟೆ ಅಲ್ಲದೆ. 0 ಕ್ಯಾಲೊರಿಗಳನ್ನು ಹೊಂದಿದೆ. ಅಷ್ಟೆ ಅಲ್ಲ ಮಧುಮೇಹಕ್ಕೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ.  

ಮಾಂಕ್‌ ಹಣ್ಣು.. ಈ ಹೆಸರನ್ನು ನೀವು ಹಿಂದೆ ಎಂದು ಕೇಳದೆ ಇರಬಹುದು. ಆದರೆ, ಈ ಹಣ್ಣಿನ ಉಪಯೋಗಗಳು ಯಾವುದೇ ಅಮೃತಕ್ಕೂ ಕಡಿಮೆ ಇಲ್ಲ ಎಂದೆ ಹೇಳಬಹುದು.   

ಸಕ್ಕರೆ, ನಮಗೆ ರುಚಿಯನ್ನು ನೀಡುತ್ತದೆ, ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಜೊತೆಗೆ ಸಕ್ಕರೆ ಸೇವನೆಯಿಂದ ನಮಗೆ ಹಲವಾರು ಆರೊಗ್ಯ ಸಮಸ್ಯೆಗಳು ಕೂಡ ಉದ್ಭವವಾಗುತ್ತದೆ.  

ಸಕ್ಕರೆ ಸೇವನೆಯೂ ನಮ್ಮ ದೈನಂದಿನ ಜೀವನಕ್ಕೆ ಅನಿವಾರ್ಯತೆ ಅಲ್ಲದೆ ಇದ್ದರೂ, ದಿನದಲ್ಲಿ ಸಾಕಷ್ಟು ಸಕ್ಕರೆ ಅಂಶ ಗೊತ್ತಿದೋ ಅಥವಾ ಗೊತ್ತಿಲ್ಲದೆಯೋ ನಮ್ಮ ದೇಹ ಸೇರುತ್ತದೆ.  

ಇದೀಗ ಸಕ್ಕರೆಗೆ ಪರ್ಯಾಯವಾಗಿ ಮಾಂಕ್‌ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಸಕ್ಕರೆಯ ಪರ್ಯಾಯ ಎಂದರೆ ತಪ್ಪಾಗಲಾರದು.  

ಮಾಂಕ್‌ ಹಣ್ಣಿನಲ್ಲಿ ಹಲವಾರು ಆರೋಗ್ಯ ಪ್ರಯೋಜನೆಗಳಿವೆ, ಈ ಹಣ್ಣನ್ನು ಹಲವಾರು ಔಷಧಿಗಳಲ್ಲಿ ಉಪಯೋಗಿಸಲಾಗುತ್ತದೆ.  

ಈ ಹಣ್ಣು 0 ಕ್ಯಾಲೊರಿಗಳನ್ನು ಹೊಂದಿದ್ದು, ಇದು ಸಕ್ಕರೆಗಿಂತ ಹೆಚ್ಚು ಸಿಹಿಯನ್ನು ಹೊಂದಿದೆ.   

ಮಾಂಕ್‌ ಹಣ್ಣು ಮಧುಮೇಹವನ್ನು ಕಂಟ್ರೋಲ್‌ ಮಾಡುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ, ಇದರಿಂದ ಹಲವು ಆರೋಗ್ಯ ಪ್ರಯೋಜನೆಗಳು ಇವೆ.  

ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಪ್ರಾಥಮಿಕ ಕಾಳಜಿಯೆಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಸಿಹಿಕಾರಕಗಳ ಪ್ರಭಾವ. ಸಾಂಪ್ರದಾಯಿಕ ಸಕ್ಕರೆಗಿಂತ ಭಿನ್ನವಾಗಿ, ಮಾಂಕ್ ಹಣ್ಣಿನ ಸಿಹಿಕಾರಕವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link