ಇಂಗ್ಲೆಂಡ್‌ನಲ್ಲಿ ಹೊಸ ವೈರಸ್ ಪತ್ತೆ: ರೋಗಲಕ್ಷಣ, ಚಿಕಿತ್ಸೆ, ಇತರ ವಿವರ ತಿಳಿಯಿರಿ

Tue, 10 May 2022-6:03 pm,

ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬಿನಂತೆಯೇ ಇರುತ್ತವೆ. ಇದರಿಂದ ಜ್ವರ, ಸ್ನಾಯು ನೋವುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು, ತಲೆನೋವು, ಶೀತ ಮತ್ತು ಬಳಲಿಕೆಗೆ ಕಾರಣವಾಗಬಹುದು. ಸಿಡುಬಿಗಿಂತ ಕಡಿಮೆ ತೀವ್ರತೆಯಿರುವಾಗ ಮಂಕಿಪಾಕ್ಸ್ ದೇಹದಾದ್ಯಂತ ದದ್ದುಗಳನ್ನು ಉಂಟುಮಾಡಬಹುದು. ಈ ದದ್ದುಗಳು ಹುರುಕುಗಳಾಗಿ ರೂಪಾಂತರಗೊಳ್ಳುವ ಮೊದಲು ಬೇರೆ ಬೇರೆ ಹಂತಗಳಲ್ಲಿ ವಿವಿಧ ಬದಲಾವಣೆಗಳಿಗೆ ಒಳಗಾಗುತ್ತವೆ.

ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿರುವವರು ವೈರಸ್‌ಗೆ ತುತ್ತಾಗಬಹುದು. ಇದು ಚರ್ಮ, ಉಸಿರಾಟದ ಪ್ರದೇಶ ಅಥವಾ ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಪ್ರವೇಶಿಸಬಹುದು. ಇದು ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬರುವ ಮೂಲಕವೂ ಹರಡಬಹುದು. ಇವುಗಳು ವೈರಸ್ನ ವಾಹಕಗಳಾಗಿರಬಹುದು ಅಥವಾ ವೈರಸ್-ಕಲುಷಿತ ವಸ್ತುಗಳ ಮೂಲಕವೂ ಹರಡುತ್ತದೆ. ಹೆಚ್ಚಿನ ಮಂಕಿಪಾಕ್ಸ್ ಪ್ರಕರಣಗಳು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಕಂಡುಬಂದಿವೆ. ಆಫ್ರಿಕಾದ ಹೊರಗಿನವರು ಹೆಚ್ಚಾಗಿ ಅಂತಾರಾಷ್ಟ್ರೀಯ ಪ್ರಯಾಣ ಅಥವಾ ಆಮದು ಮಾಡಿಕೊಂಡ ಪ್ರಾಣಿಗಳಿಂದಾಗಿ ವೈರಸ್‍ಗೆ ತುತ್ತಾಗಿದ್ದಾರೆ.

ಮಂಗನ ಕಾಯಿಲೆಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಸಿಡುಬು ಲಸಿಕೆಯು ಶೇ.85ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಸಿಡುಬು-ಉಂಟುಮಾಡುವ ವೆರಿಯೊಲಾ ವೈರಸ್ ಅನ್ನು ಒಳಗೊಂಡಿರುವ ಅದೇ ಆರ್ಥೋಪಾಕ್ಸ್ವೈರಸ್ ಕುಲಕ್ಕೆ ಸೇರಿದ ವೈರಸ್‍ನಿಂದ ಉಂಟಾಗುತ್ತದೆ. 1958ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ರೋಗವು ‘ಜೂನೋಸಿಸ್' ಅಂದರೆ ಇದು ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಸಂಶೋಧನೆಗಾಗಿ ಇರಿಸಲಾಗಿದ್ದ ಕೋತಿಗಳಲ್ಲಿ ಮಂಗನ ಕಾಯಿಲೆ ರೋಗವು ಕಂಡುಬಂದಿತ್ತು. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಮಂಕಿಪಾಕ್ಸ್ ವೈರಸ್ ಅನ್ನು ಹೊಂದಿರುವ ಪ್ರಾಣಿಗಳು ವಾಸಿಸುವ ಉಷ್ಣವಲಯದ ಮಳೆಕಾಡುಗಳಿಗೆ ಹತ್ತಿರದಲ್ಲಿ  ಕಂಡುಬಂದಿದೆ. ಸಂಶೋಧನೆಯ ಆಧಾರದ ಮೇಲೆ ಅಳಿಲುಗಳು, ಇಲಿಗಳು ಮತ್ತು ಕೆಲ ನಿರ್ದಿಷ್ಟ ಜಾತಿಯ ಕೋತಿಗಳಲ್ಲಿ ಈ ಸೋಂಕನ್ನು ಗುರುತಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link