Monkeypox: ಮಂಕಿಪಾಕ್ಸ್ ವೈರಸ್ ಹೇಗೆ ಹರಡುತ್ತದೆ ಗೊತ್ತಾ..?
ಮಂಕಿಫಾಕ್ಸ್ ಕಾಯಿಲೆ ಸಿಡುಬು ವೈರಸ್‌ಗೆ ನಿಕಟ ಸಂಬಂಧ ಹೊಂದಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಹರಡಬಹುದು.
ಸಾಮಾನ್ಯವಾಗಿ ದದ್ದು, ಹುಣ್ಣುಗಳು ಹೊಂದಿರುವ ವ್ಯಕ್ತಿಯೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಒಳಗಾದರೆ ಮನುಷ್ಯನಿಂದ ಮನುಷ್ಯನಿಗೆ ಈ ಸೋಂಕು ಹರಡುತ್ತದೆ.
ನಿಕಟ ಲೈಂಗಿಕ ಸಂಪರ್ಕದ ಸಮಯದಲ್ಲಿ ಉಸಿರಾಟದ ಹನಿಗಳು ಅಥವಾ ಮೌಖಿಕ ದ್ರವಗಳ ಮೂಲಕವೂ ಮಂಕಿಫಾಕ್ಸ್ ಕಾಯಿಲೆ ಹರಡಬಹುದು.
ಮಂಕಿಪಾಕ್ಸ್ ವೈರಸ್‌ನಿಂದ ಕಲುಷಿತಗೊಂಡಿರುವ ಬಟ್ಟೆಗಳು, ವಸ್ತುಗಳು ಅಥವಾ ಮೇಲ್ಮೈಗಳೊಂದಿಗಿನ ಸಂಪರ್ಕವು (ಬಟ್ಟೆ, ಹಾಸಿಗೆ ಅಥವಾ ಟವೆಲ್‌ಗಳಂತಹವು) ಸಹ ಸೋಂಕು ಹರಡಲು ಕಾರಣವಾಗಬಹುದು.
ಜ್ವರ, ತಲೆನೋವು, ಸ್ನಾಯು ನೋವುಗಳು, ಬೆನ್ನುನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಚಳಿ ಮತ್ತು ನಿಶ್ಯಕ್ತಿ ಮಂಕಿಫಾಕ್ಸ್ ಕಾಯಿಲೆಯ ರೋಗ ಲಕ್ಷಣಗಳಾಗಿವೆ.
ಜ್ವರ ಕಾಣಿಸಿಕೊಂಡ ನಂತರ 1-3 ದಿನಗಳಲ್ಲಿ ರೋಗಿಯಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತದೆ. ಮೊದಲು ಮುಖದ ಮೇಲೆ ದದ್ದು ಪ್ರಾರಂಭವಾಗುತ್ತದೆ. ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಈ ಅನಾರೋಗ್ಯವು ಸಾಮಾನ್ಯವಾಗಿ 2-4 ವಾರಗಳವರೆಗೆ ಇರುತ್ತದೆ.