Monthly Income Plan: ಪ್ರತಿ ತಿಂಗಳು ನಿಮ್ಮ ಖಾತೆಗೆ ಆದಾಯ ಹರಿದು ಬರಬೇಕೆ? ಇಲ್ಲಿವೆ ನಾಲ್ಕು ಉತ್ತಮ ಆಯ್ಕೆಗಳು

Sat, 10 Jul 2021-10:16 pm,

1. Post Office MIS - ಪೋಸ್ಟ ಆಫೀಸ್ ನ ಮಂಥಲಿ ಇನ್ಕಂ ಸ್ಕೀಮ್ ಅಡಿ ಸಿಂಗಲ್ ಅಕೌಂಟ್ ಮೂಲಕ ರೂ.4.5ಲಕ್ಷ ಹಾಗೂ ಜಂಟಿ ಖಾತೆಯ ಮೂಲಕ 9 ಲಕ್ಷ ರೂ.ಗಳ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಶೇ.6.6 ರಷ್ಟು ವಾರ್ಷಿಕ ಬಡ್ಡಿ ಲಭಿಸುತ್ತದೆ. ಈ ಬಡ್ಡಿದರವನ್ನು ಒಟ್ಟು 12 ಭಾಗಗಳಾಗಿ ವಿಂಗಡಿಸಿ ಪ್ರತಿ ತಿಂಗಳು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

2. SBI Annuity Deposit Scheme - SBI Annuity Deposit Scheme ನಲ್ಲಿ ಪ್ರತಿ ತಿಂಗಳು ಪ್ರಿನ್ಸಿಪಲ್ ಅಮೌಂಟ್ ಜೊತೆಗೆ ಬಡ್ಡಿ ಸಿಗುತ್ತದೆ. ಈ ಯೋಜನೆಗಳಲ್ಲಿ 36, 60, 84 ಅಥವಾ 120 ತಿಂಗಳ ಅವಧಿಗಾಗಿ ಡಿಪಾಸಿಟ್ ಮಾಡಬಹುದು. ಅತ್ಯಂತ ಕನಿಷ್ಠ ಅನ್ಯೂಟಿ ಅಂದರೆ 1000 ರೂ. ಪ್ರತಿ ತಿಂಗಳು ಆಗಿದೆ. ಇದರಲ್ಲಿ ಟರ್ಮ್ ಡಿಪಾಸಿಟ್ ರೀತಿಯಲ್ಲಿಯೇ ಬಡ್ಡಿ ಸಿಗುತ್ತದೆ. 

3. Systematic Withdrawal Plan - SWP ನಲ್ಲಿ ಹೂಡಿಕೆದಾರರು ತಾವು ಮಾಡಿರುವ ಮ್ಯೂಚವಲ್ ಫಂಡ್ ನಲ್ಲಿನ ಹೂಡಿಕೆಯ ಮೇಲೆ ತಿಂಗಳಿಗೆ ನಿಶ್ಚಿತ ಆದಾಯ ಪಡೆಯಬಹುದು. ಇದು ರೆಗ್ಯೂಲರ್ ಇನ್ಕಂಮ್ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ತಿಂಗಳಿಗಷ್ಟೇ ಅಲ್ಲ, ನಿತ್ಯ, ವಾರಕ್ಕೊಮ್ಮೆ, ಮೂರು ತಿಂಗಳಿಗೊಮ್ಮೆ ಅಥವಾ ವಾರ್ಷಿಕ ಆದಾರದ ಮೇಲೆ ಹಣವನ್ನು ಹಿಂಪಡೆಯಬಹುದು.

4. Dividend Option - ಮಂಥಲಿ ಇನ್ಕಮ್ ಅವಶ್ಯಕತೆ ಇದ್ದರೆ ಡಿವಿಡೆಂಡ್ ಆಪ್ಶನ್ ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಈ ಯೋಜನೆ FDಗಿಂತ ಉತ್ತಮ ಆದಾಯ ನೀಡಬಲ್ಲದು. ಇದರಲ್ಲಿ ಒಂದು ನಿಶ್ಚಿತ ಪ್ರಮಾಣದ ಕಾರ್ಪಸ್ ಫಂಡ್ ಸಿದ್ಧಪಡಿಸಿ ತಿಂಗಳಿಗೆ ಇನ್ಕಮ್ ಪಡೆಯಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link