Moon In Gemini: ಮಿಥುನ ರಾಶಿಗೆ ಚಂದ್ರನ ಪ್ರವೇಶ, ಇನ್ನೊಂದು ತಿಂಗಳು ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ
ಧಾರ್ಮಿಕ ನಂಬಿಕೆಗಳು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನಿಗೆ ವಿಶೇಷ ಸ್ಥಾನಮಾನವಿದೆ. ಚಂದ್ರನನ್ನು ಮನಸ್ಸಿನ ಅಂಶ ಎಂದು ಬಿಂಬಿಸಲಾಗುತ್ತದೆ. ಇತರ ಗ್ರಹಗಳಂತೆ ಚಂದ್ರನು ಸಹ ನಿಗದಿತ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತಾನೆ.
ನವೆಂಬರ್ ತಿಂಗಳ ಮೊದಲ ದಿನವಾದ ಇಂದು 01 ನವೆಂಬರ್ 2023ರಂದು ಚಂದ್ರನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಮುಂದಿನ ಒಂದು ತಿಂಗಳ ಕಾಲ ಚಂದ್ರ ಮಿಥುನ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ.
ಚಂದ್ರನ ಈ ರಾಶಿ ಪರಿವರ್ತನೆಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಗೋಲ್ಡನ್ ಟೈಮ್ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ...
ಚಂದ್ರನ ಸಂಚಾರವು ಮೇಷ ರಾಶಿಯವರಿಗೆ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ಭವಿಷ್ಯಕ್ಕಾಗಿ ಉತ್ತಮ ಉಳಿತಾಯವೂ ಸಾಧ್ಯವಾಗಲಿದೆ. ವೃತ್ತಿ ಬದುಕಿನಲ್ಲಿಯೂ ಯಶಸ್ಸು ನಿಮ್ಮದಾಗಲಿದೆ.
ನವೆಂಬರ್ ತಿಂಗಳಿನಲ್ಲಿ ಚಂದ್ರನ ಸಂಚಾರ ಸಿಂಹ ರಾಶಿಯವರಿಗೂ ಮಂಗಳಕರ ಫಲಗಳನ್ನು ನೀಡಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಸುಸಮಯ. ಕೌಟುಂಬಿಕ ಸಮಸ್ಯೆಗಳು ಕ್ರಮೇಣ ಬಗೆಹರಿಯುತ್ತವೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ಇದಲ್ಲದೆ, ನಿಮ್ಮ ಪ್ರೇಮ ಜೀವನವೂ ಉತ್ತಮವಾಗಿರುತ್ತದೆ.
ಚಂದ್ರ ರಾಶಿ ಬದಲಾವಣೆಯು ವೃಶ್ಚಿಕ ರಾಶಿಯವರ ಬದುಕಿನಲ್ಲಿಯೂ ಧನಾತ್ಮಕ ಫಲಗಳನ್ನು ತರಲಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನೀವು ಬಯಸಿದ ಕೆಲಸ ಪ್ರಾಪ್ತಿಯಾಗಲಿದ್ದು, ಇದರಲ್ಲಿ ಯಶಸ್ಸನ್ನು ಪಡೆಯುವಿರಿ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಿರಿ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ಸಹ ನೀಡಲಿದೆ. ಇದಲ್ಲದೆ, ಹಣದ ಹರಿವು ಕೂಡ ಹೆಚ್ಚಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.