ಇವರೇ ನೋಡಿ ಖ್ಯಾತ ನಟ ಶರಣ್ ಪತ್ನಿ, ಮಕ್ಕಳು : ಇಬ್ಬರು ಮಕ್ಕಳು ಕೂಡಾ ನಟನೆಯಲ್ಲಿ ಎತ್ತಿದ ಕೈ

Wed, 15 May 2024-5:24 pm,

ಕನ್ನಡದ ಹೆಸರಾಂತ ಹಾಸ್ಯ ನಟ, ನಿರ್ಮಾಪಕ, ಹಿನ್ನೆಲೆ ಗಾಯಕ ಶರಣ್ ಯಾರಿಗೆ ತಾನೇ ಗೊತ್ತಿಲ್ಲ. ಶರಣ್ ನಟಿ ಶೃತಿ ಸಹೋದರ.   

ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.   

ಪ್ರೇಮ ಪ್ರೇಮ ಪ್ರೇಮ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪರಿಚಯರಾದ ಶರಣ್ ಈಗ ನಟ, ನಿರ್ಮಾಪಕ , ಹಿನ್ನೆಲೆ ಗಾಯಕನಾಗಿ ಹೆಸರು ಮಾಡಿದ್ದಾರೆ.   

ಶರಣ್ ಖ್ಯಾತ ನಟಿ ಶೃತಿ ಅಣ್ಣ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಅವರ ಪತ್ನಿಯ ಪತ್ನಿ ಮತ್ತು ಮಕ್ಕಳ ಪರಿಚಯ ಹೆಚ್ಚಿನವರಿಗೆ ಇಲ್ಲ. 

ಶರಣ್   2002ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಪತ್ನಿ ಪಲ್ಲವಿ. ಶರಣ್ ಅವರ ಪ್ರತಿ ಕೆಲಸದಲ್ಲಿಯೂ ಬೆನ್ನೆಲುಬಾಗಿ ನಿಂತಿದ್ದಾರೆ ಪಲ್ಲವಿ.

ಇನ್ನು ಇವರಿಗೆ ಇಬ್ಬರು ಮಕ್ಕಳು. ಹಿರಿಯ ಮಗನ ಹೆಸರು ಹೃದಯ್, ಕಿರಿಯ ಮಗಳು ಪುಣ್ಯ. 

 ಶರಣ್ ಮಕ್ಕಳಾದ ಹೃದಯ್ ಮತ್ತು ಪುಣ್ಯ ಇಬ್ಬರೂ ಈಗಾಗಲೇ ಚಿತ್ರರಂಗ ಪ್ರವೇಶಿಸಿದ್ದು, ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ. 

ಮಗಳು ಪುಣ್ಯ ಅವತಾರ ಪುರುಷದಲ್ಲಿ ಕಾಣಿಸಿಕೊಂಡಿದ್ದರೆ, ಮಗಳ ಹೃದಯ್  ಗುರು ಶಿಷ್ಯರು ಚಿತ್ರದ ಮೂಲಕ ಹೆಸರು ಮಾಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link