ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !

Tue, 17 Sep 2024-9:55 am,

ಗೌತಮ್ ಅದಾನಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಆನ್ ಸ್ಥಾನದಲ್ಲಿದ್ದಾರೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿಯೂ ಇವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.   

ಆದರೆ ಇವರ ಕುಟುಂಬ ಮಾತ್ರ ಅಷ್ಟಾಗಿ ಪ್ರಚಾರದಲ್ಲಿ ಇರುವುದಿಲ್ಲ. ಅದಾನಿ ಪತ್ನಿ ಮತ್ತು ಮಕ್ಕಳು ಯಾರು ಎನ್ನುವ ಮಾಹಿತಿ ಅನೇಕರಿಗೆ ತಿಳಿದಿಲ್ಲ.

ಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ. ಗೌತಮ್ ಮತ್ತು ಪ್ರೀತಿಗೆ ಇಬ್ಬರು ಮಕ್ಕಳು. ಅವರೇ ಕರಣ್ ಅದಾನಿ ಮತ್ತು ಜೀತ್ ಅದಾನಿ.

ಗೌತಮ್ ಅದಾನಿ ಹೇಳಿಕೊಳ್ಳುವಂಥಹ ವಿದ್ಯಾವಂತ ಅಲ್ಲ.ಆದರೆ ಅವರು ಮದುವೆಯಾಗಿದ್ದು ಮಾತ್ರ ವೈದ್ಯೆಯನ್ನು.ಪ್ರೀತಿ ಅದಾನಿ ವೃತ್ತಿಪರ ದಂತವೈದ್ಯೆ. ಅವರು ಪ್ರತಿ ಹೆಜ್ಜೆಯಲ್ಲೂ ತನ್ನ ಗಂಡನೊಂದಿಗೆ ಬೆಂಬಲವಾಗಿ ನಿಂತಿದ್ದಾರೆ. 

ಪುತ್ರ ಕರಣ್ ಅದಾನಿ ಅದಾನಿ ಪೋರ್ಟ್ಸ್ ಮತ್ತು SEZ ಲಿಮಿಟೆಡ್ (APSEZ) ನ ವ್ಯವಸ್ಥಾಪಕ ನಿರ್ದೇಶಕ. ಇವರ ಪತ್ನಿ ಪರಿಧಿ ವಕೀಲೆ.ಇವರಿಗೆ ಅನುರಾಧ ಎನ್ನುವ ಹೆಣ್ಣು ಮಗುವಿದೆ.    

ಅದಾನಿಯ ಇನ್ನೊಬ್ಬ ಪುತ್ರ ಜೀತ್ ಅದಾನಿ ಅದಾನಿ ಗ್ರೂಪ್‌ನ ಹಣಕಾಸು ವಿಭಾಗದ ಉಪಾಧ್ಯಕ್ಷ. ಜೊತೆಗೆ ಅದಾನಿ ಏರ್‌ಪೋರ್ಟ್ಸ್ ಕಂಪನಿ ಮತ್ತು ಅದಾನಿ ಡಿಜಿಟಲ್ ಲ್ಯಾಬ್‌ಗಳ ಸಾರಥ್ಯ ಇವರದ್ದೇ.  C.Dinesh & Co. Pvt. Ltd.ನ ವಜ್ರದ ವ್ಯಾಪಾರಿ ಜೈಮಿನ ಷಾ ವರ ಪುತ್ರಿ ದಿವಾ ಜೊತೆ ಜೀತ್ ಅದಾನಿ  ನಿಶ್ಚಿತಾರ್ಥವಾಗಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link