ರಂಗಾಯಣ ರಘು ಮಾತ್ರವಲ್ಲ ಅವರ ಪತ್ನಿ ಕೂಡಾ ಅದ್ಭುತ ನಟಿ !ಪುತ್ರಿಯೂ ಪಡೆದಿದ್ದಾರೆ ಇವರಷ್ಟೇ ಖ್ಯಾತಿ

Tue, 23 Apr 2024-5:33 pm,
Rangayana Raghu

ರಂಗಾಯಣ ರಘು  ಕನ್ನಡ ಚಿತ್ರರಂಗದ  ದುಬಾರಿ ಪೋಷಕ ನಟ ಎಂದೇ ಖ್ಯಾತಿ. ಇವರು ಸಿನಿಮಾದಲ್ಲಿದ್ದರೆ ಅಲ್ಲಿ ಹಾಸ್ಯಕ್ಕೇನು ಕೊರತೆಯಿಲ್ಲ.ತಲೆ ಬಾಚ್ಕೊಳಿ, ಪೌಡ್ರು ಹಾಕೊಳಿ, ದುನಿಯಾ ತುಂಬಾ ಕಾಸ್ಟ್ಲಿ ಎನ್ನುವ ಡೈಲಾಗ್ ಮೂಲಕವೇ ಫೇಮಸ್ ಆದವರು. 

Original Name

ಇವರ ನಿಜ ಹೆಸರು ಕೊತ್ತೂರು ಚಿಕ್ಕರಂಗಪ್ಪ ರಘುನಾಥ್ ಅಲಿಯಾಸ್ ಕೆ.ಸಿ.ರಘುನಾಥ್. ಇವರು ರಂಗಾಯಣ ಸೇರಿದ ಕಾರಣದಿಂದ ಇವರ ಹೆಸರು ರಂಗಾಯಣ ರಘು ಆಗಿ ಬದಲಾಯಿತು. 

Rangaayana Raghu marriage

ರಂಗಾಯಣ ರಘು ಅವರದ್ದು ಲವ್ ಮ್ಯಾರೇಜ್. ಪ್ರೇಮ ವಿವಾಹವಾದರೂ ಮನೆ ಮಂದಿಯನ್ನು ಒಪ್ಪಿಸಿ ಎಲ್ಲರ ಸಮ್ಮುಖದಲ್ಲಿಯೇ ನೆರವೇರಿದ ಮದುವೆ ಅದು.   

ರಂಗಾಯಣ ರಘು ಅವರ ಪತ್ನಿ ಮಂಗಳ. ಮಂಗಳ ಕೂಡಾ ರಂಗಭೂಮಿ ಕಲಾವಿದೆ ಮತ್ತು ನಟಿ. ರಂಗಾಯಣ ರಘು ಮತ್ತು ಪತ್ನಿ ಮಂಗಳ ಅವರದ್ದು ಸಂಚಾರಿ ಥಿಯೇಟರ್ ಕೂಡಾ ಇದೆ. ಮಂಗಳ ನಾಟಕಗಳ ಆಯೋಜನೆ ಮಾಡುತ್ತಾರೆ, ನಟಿಸುತ್ತಾರೆ ಅಷ್ಟೇ ಯಾಕೆ ನಿರ್ದೇಶನ ಕೂಡಾ ಮಾಡುತ್ತಾರೆ. 

ಇನ್ನು ರಂಗಾಯಣ ರಘು ಪುತ್ರಿ ಚುಕ್ಕಿ ಕೂಡಾ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.ಇವರು ಕೂಡಾ ಸಂಚಾರಿ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿದ್ದು, ನಾಟಕಗಳನ್ನು ನಿರ್ದೇಶಿಸುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link