ಅಬ್ಬಬ್ಬಾ !ಕೇವಲ 23 ವರ್ಷಕ್ಕೆ ಸೌರಾವ್ ಗಂಗೂಲಿ ಪುತ್ರಿ ಗಳಿಸಿರುವ ಆಸ್ತಿ ಇದು!ಕ್ರಿಕೆಟ್ ನಲ್ಲಿ ಎಳ್ಳಷ್ಟೂ ಆಸಕ್ತಿ ಇರದೆ ಕಾರ್ಪೋರೆಟ್ ನೌಕರಿಯಲ್ಲಿಯೇ ಕಮಾಲ್ ಮಾಡಿದ ಬೆಡಗಿ

Wed, 01 Jan 2025-1:53 pm,

ಸನಾ ಗಂಗೂಲಿ  ಕೋಲ್ಕತ್ತಾದ ಲೊರೆಟೊ ಹೌಸ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 1942 ರಲ್ಲಿ ಸ್ಥಾಪನೆಯಾದ ಲೊರೆಟೊ ಹೌಸ್ ದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ.

ಸನಾ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 98 ಶೇಕಡಾ ಅಂಕಗಳನ್ನು ಗಳಿಸಿ  ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದರು. ಅವರು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.ಸನಾ PwC ಮತ್ತು Deloitteನಲ್ಲಿ ಇಂಟರ್ನ್‌ಶಿಪ್ ಕೂಡಾ ಮಾಡಿದ್ದಾರೆ.

ಅವರು ಪ್ರಸ್ತುತ INNOVERV ನಲ್ಲಿ ಸಲಹೆಗಾರರಾಗಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬೇಸಿಗೆ ಶಾಲಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ.  ಪ್ರಸ್ತುತ ಹಣಕಾಸು ವಿಶ್ಲೇಷಣೆ ಮತ್ತು ಹೂಡಿಕೆ ನಿರ್ವಹಣೆಯಲ್ಲಿ CFA ಪ್ರಮಾಣೀಕರಣ  ಮಾಡುತ್ತಿದ್ದಾರೆ. ಮೋರ್ಗನ್ ಸ್ಟಾನ್ಲಿಯಲ್ಲಿ ವೆಲ್ತ್ ಮ್ಯಾನೇಜ್ಮೆಂಟ್ ವಿಶ್ಲೇಷಕರಾಗಿಯೂ ಕೆಲಸ ಮಾಡಿದ್ದಾರೆ.  

ಸನಾ ಕೂಡ ತನ್ನ ತಾಯಿಯಂತೆ ತರಬೇತಿ ಪಡೆದ ನೃತ್ಯಗಾರ್ತಿ. ಅವರು ಭಾರತದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಸಮಯ ಸಿಕ್ಕಾಗಲೆಲ್ಲಾ ಸನಾ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.  

ಸನಾ ತನ್ನ ವೃತ್ತಿಜೀವನವನ್ನು ಬಹಳ ಪ್ರಭಾವಶಾಲಿಯಾಗಿ ಪ್ರಾರಂಭಿಸಿದ್ದಾಳೆ. ಅನೇಕ ದೊಡ್ಡ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡುವ ಮೂಲಕ ಅವರು ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ. HSBC, KPMG, Goldman Sachs, Barclays, ICICI, PwC ಮತ್ತು Deloitte ನಂತಹ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸನಾ ತರಬೇತಿ ಪಡೆದಿದ್ದಾರೆ.

ಈ ಕಂಪನಿಗಳಲ್ಲಿ ಅವರ ಇಂಟರ್ನ್‌ಶಿಪ್ ಸಮಯದಲ್ಲಿ, ಅವರಿಗೆ ಉತ್ತಮ ಪ್ಯಾಕೇಜ್ ಕೂಡಾ ಸಿಕ್ಕಿತು. PwC ಯಲ್ಲಿ ಅವರ ಇಂಟರ್ನ್‌ಶಿಪ್‌ಗಾಗಿ, ಅವರು ಸುಮಾರು 30 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಪಡೆದರು. ಅದೇ ಸಮಯದಲ್ಲಿ, ಡೆಲಾಯ್ಟ್‌ನಲ್ಲಿ ಇಂಟರ್ನ್‌ಶಿಪ್ ಪ್ಯಾಕೇಜ್ ವರ್ಷಕ್ಕೆ 5 ರಿಂದ 12 ಲಕ್ಷದವರೆಗೆ ಇರುತ್ತದೆ. 

ಸನಾ ಗಂಗೂಲಿ ಅವರ ನಿವ್ವಳ ಮೌಲ್ಯದ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಬಂದಿಲ್ಲ. ಅವರು ಇನ್ನೂ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿದ್ದಾರೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಅವರ ನಿವ್ವಳ ಮೌಲ್ಯದ ಮಾಹಿತಿ ಬಹಿರಂಗಗೊಳ್ಳಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link