ವ್ಯಾಪಾರ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಅದಾನಿ ಮಕ್ಕಳು ಇವರೇ ನೋಡಿ !ವ್ಯಾಪಾರ ಮುನ್ನಡೆಸುವುದರಲ್ಲಿ ಅಂಬಾನಿ ಮಕ್ಕಳಿಗಿಂತ ಇದ್ದಾರೆ ಮುಂದು !

Fri, 19 Jul 2024-9:42 am,

ಗೌತಮ್ ಅದಾನಿ ವ್ಯಾಪಾರೋದ್ಯಮದಲ್ಲಿ ದೊಡ್ಡ ಹೆಸರು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಯೂ ಇದೆ ಸ್ಥಾನ.   

ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಪ್ರಚಾರದಿಂದ ದೂರವೆ ಉಳಿದಿದೆ. ಆದರೆ ಅಂಬಾನಿ ಪರಿವಾರದಂತೆ ಅವರ ಜೀವನಶೈಲಿಯ ಬಗ್ಗೆಯೂ ತಿಳಿದುಕೊಳ್ಳುವ ಆಸಕ್ತಿ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. 

ಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ. ಗೌತಮ್ ಮತ್ತು ಪ್ರೀತಿಗೆ ಇಬ್ಬರು ಮಕ್ಕಳು. ಅವರೇ ಕರಣ್ ಅದಾನಿ ಮತ್ತು ಜೀತ್ ಅದಾನಿ.

ಕರಣ್ ಅದಾನಿ ಅದಾನಿ ಪೋರ್ಟ್ಸ್ ಮತ್ತು SEZ ಲಿಮಿಟೆಡ್ (APSEZ) ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.ಇವರ ಪತ್ನಿ ಪರಿಧಿ ವಕೀಲೆ. ಇವರಿಗೆ ಅನುರಾಧ ಎನ್ನುವ ಹೆಣ್ಣು ಮಗುವಿದೆ.   

ಅದಾನಿಯ ಇನ್ನೊಬ್ಬ ಪುತ್ರ ಜೀತ್ ಅದಾನಿ ಅದಾನಿ ಗ್ರೂಪ್‌ನ ಹಣಕಾಸು ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಇದರ ಜೊತೆಗೆ ಅದಾನಿ ಏರ್‌ಪೋರ್ಟ್ಸ್ ಕಂಪನಿ ಮತ್ತು ಅದಾನಿ ಡಿಜಿಟಲ್ ಲ್ಯಾಬ್‌ಗಳನ್ನು ಮುನ್ನಡೆಸುತ್ತಿದ್ದಾರೆ. ಇವರು  C.Dinesh & Co. Pvt. Ltd.ನ ವಜ್ರದ ವ್ಯಾಪಾರಿ ಜೈಮಿನ ಷಾ ವರ ಪುತ್ರಿ ದಿವಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link