ಕೊರೊನಾ ಕಾಲದಲ್ಲಿ ನುಗ್ಗೆ ಸೊಪ್ಪು ಮತ್ತು ಪೌಡರ್ ನಮ್ಮ ಆರೋಗ್ಯಕ್ಕೆ ಸೂಪರ್ ಫುಡ್, ಯಾಕೆ ಗೊತ್ತಾ?
ನುಗ್ಗೆ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಬಿ 6 ಹಾಗೂ ರೈಬೋಫ್ಲೆವಿನ್ ಇರುತ್ತದೆ. ಇದಲ್ಲದೆ ಇದು ಪೊಟ್ಯಾಸಿಯಂ, ವಿಟಮಿನ್ ಎ, ವಿಟಮಿನ್ ಇ ಹಾಗೂ ಮ್ಯಾಗ್ನೆಸಿಯಂಗಳ ಆಗರವಾಗಿದೆ.
ನುಗ್ಗೆ ಸೊಪ್ಪಿನ ಎಲೆಗಳಿಂದ ತಯಾರಿಸಲಾಗಿರುವ ಪೌಡರ್ ಹೇರಳ ಪ್ರಮಾಣದಲ್ಲಿ ಪ್ರೋಟಿನ್ ಹೊಂದಿದೆ. ಒಂದು ದೊಡ್ಡ ಸ್ಪೂನ್ ಪೌಡರ್ ನಲ್ಲಿ 3 ಗ್ರಾಂ ಪ್ರೋಟಿನ್ ಹಾಗೂ ಅತ್ಯಾವಶ್ಯಕ ಅಮೈನೊ ಆಸಿಡ್ ಗಳನ್ನು ಹೊಂದಿರುತ್ತದೆ. ಇವು ದೇಹದ ಖಂಡಗಳಗಳಿಗೆ ಶಕ್ತಿ ನೀಡಿ ಉತ್ಪಾದನೆ ಹಾಗೂ ಮನಸ್ಥಿತಿಯನ್ನು ಸುಧಾರಿಸುತ್ತದೆ.
ನುಗ್ಗೆ ಸೊಪ್ಪಿನಲ್ಲಿ ಜಠರದ ಆಕ್ಸಿಕರಣವನ್ನು ತಡೆಯಲು ಪಾಲಿಫೆನೋಲ್ಸ್ ಗಳ ಹೈ ಕಾಂಸನ್ಟ್ರೆಶನ್ ಇರುತ್ತದೆ. ಲಿವರ್ ಫೈಫ್ರೋಸಿಸ್ ಕಡಿಮೆ ಮಾಡಲು ಹಾಗೂ ಲೀವರ್ ಗೆ ಆಗುವ ಹಾನಿ ತಪ್ಪಿಸಲು ನುಗ್ಗೆ ಸೊಪ್ಪು ಸೇವಿಸುವುದು ಉತ್ತಮ.
ನುಗ್ಗೆ ಸೊಪ್ಪಿನ ಪೌಡರ್ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ದೂರಗೊಳಿಸುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ.
ಇದು ನಮ್ಮ ತ್ವಚೆಯನ್ನು ಕೂಡ ಸುಂದರಗೊಳಿಸುತ್ತದೆ. ನುಗ್ಗೆಸೊಪ್ಪಿನ ಪೌಡರ್ ನಿಂದ ತಯಾರಿಸಲಾಗಿರುವ ಫೆಸ್ ಪ್ಯಾಕ್ ನಿಂದ ಮೊಡವೆ, ಕಲೆಗಳು ಹಾಗೂ ಪಿಂಪಲ್ಸ್ ಗಳಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಇದರಿಂದ ತ್ವಚೆಗೆ ಪೋಷಣೆ ಸಿಗುತ್ತದೆ ಮತ್ತು ನೈಸರ್ಗಿಕವಾಗಿ ತ್ವಚೆ ಹೊಳೆಯಲಾರಂಭಿಸುತ್ತದೆ.
ಚಳಿಗಾಲದ ದಿನಗಳಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ವೈರಲ್ ಇನ್ಫೆಕ್ಷನ್ ಗಳಂತಹ ಸಮಸ್ಯೆಗಳು ಸಾಮಾನ್ಯ. ಇಂತಹುದರಲ್ಲಿ ನುಗ್ಗೆ ಸೊಪ್ಪಿನ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದಾಗಿದೆ.