ಟೀಂ ಇಂಡಿಯಾದ ಬೌಲಿಂಗ್ ಕೋಚ್ ಸ್ಥಾನಕ್ಕೆ ಎಂಟ್ರಿ ಕೊಟ್ಟ ಪಾಕ್ ತಂಡದ ಮಾಜಿ ಕೋಚ್..!
ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮೋರ್ನೆ ಮೊರ್ಕೆಲ್ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಬರಲಿದೆ ಎಂದು ಪ್ರಮುಖ ಕ್ರಿಕೆಟ್ ವೆಬ್‌ಸೈಟ್ ಮಾಹಿತಿಯನ್ನು ಪ್ರಕಟಿಸಿದೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ಮೊರ್ನೆ ಮೊರ್ಕೆಲ್ ಹೆಸರನ್ನು ಪ್ರಸ್ತಾಪಿಸಿದ್ದು, ಬಿಸಿಸಿಐ ಅವರನ್ನು ಅಂತಿಮಗೊಳಿಸಿದೆಯಂತೆ. ಅವರು ಸೆಪ್ಟೆಂಬರ್ 1 ರಿಂದ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್, ಸಹಾಯಕ ಸಿಬ್ಬಂದಿ ನೇಮಕ ವಿಚಾರದಲ್ಲಿ ತಮಗೆ ಅನುಕೂಲವಾದವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಗಂಭೀರ್ ನಾಯಕತ್ವದಲ್ಲಿ ಮೋರ್ನೆ ಮೊರ್ಕೆಲ್ ಕೆಕೆಆರ್ ಅನ್ನು ಪ್ರತಿನಿಧಿಸಿದ್ದರು. 2014ರ ಋತುವಿನಲ್ಲಿ ಇವರಿಬ್ಬರೂ ಒಟ್ಟಿಗೆ ಪ್ರಶಸ್ತಿ ಗೆದ್ದಿದ್ದರು. ಗಂಭೀರ್ ಅವರ ಮಾರ್ಗದರ್ಶನದ ಸಮಯದಲ್ಲಿ ಮೋರ್ನೆ ಮೊರ್ಕೆಲ್ ಲಕ್ನೋ ಸೂಪರ್‌ಜೈಂಟ್ಸ್‌ನ ಬೌಲಿಂಗ್ ಕೋಚ್ ಆಗಿದ್ದರು.
ಮೊರ್ನೆ ಮೊರ್ಕೆಲ್ ಅಂತರಾಷ್ಟ್ರೀಯ ಬೌಲಿಂಗ್ ಕೋಚ್ ಆಗಿಯೂ ಅನುಭವ ಹೊಂದಿದ್ದಾರೆ. ಮೊರ್ಕೆಲ್ ಕೆಲಕಾಲ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಪಿಎಸ್ ಹಾಗೂ ಐಪಿಎಲ್ ನಲ್ಲಿ ಕೋಚ್ ಆಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಅಭಿಷೇಕ್ ನಾಯರ್ ಮತ್ತು ನೆದರ್ಲೆಂಡ್ಸ್‌ನ ಮಾಜಿ ಆಲ್‌ರೌಂಡರ್ ಟೆನ್ ಡಸ್ಕೇಟ್ ಈಗಾಗಲೇ ಟೀಂ ಇಂಡಿಯಾದ ಸಹಾಯಕ ಕೋಚ್‌ಗಳಾಗಿ ನೇಮಕಗೊಂಡಿದ್ದಾರೆ.
ಟೀಂ ಇಂಡಿಯಾ ಬೌಲಿಂಗ್ ಕೋಚ್ ಹುದ್ದೆಗೆ ಭಾರತದ ಮಾಜಿ ಕ್ರಿಕೆಟಿಗರಾದ ಆರ್.ವಿನಯ್ ಕುಮಾರ್, ಮೋರ್ನೆ ಮೊರ್ಕೆಲ್ ಮತ್ತು ಲಕ್ಷ್ಮೀಪತಿ ಬಾಲಾಜಿ ಪೈಪೋಟಿ ನಡೆಸಿದ್ದಾರೆ ಎಂಬ ವರದಿಗಳಿವೆ. ಆದರೆ ಗಂಭೀರ್ ಅವರ ಒತ್ತಾಯದ ಕಾರನ ಮಾರ್ಕೆಲ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ.
ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ಗಂಭೀರ್ ಮಿಶ್ರ ಫಲಿತಾಂಶಗಳನ್ನು ಎದುರಿಸಿದರು. ಸೂರ್ಯಕುಮಾರ್ ನಾಯಕತ್ವದ ಟೀಂ ಇಂಡಿಯಾ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು ಆದರೆ ರೋಹಿತ್ ಸೇನಾ 0-2 ಅಂತರದಲ್ಲಿ ಸೋತಿತ್ತು. ಸುಮಾರು 27 ವರ್ಷಗಳ ನಂತರ ಶ್ರೀಲಂಕಾ ಭಾರತ ವಿರುದ್ಧ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.