Morning Astro Tips: ಸೂರ್ಯನಿಗೆ ಅರ್ಘ್ಯವಾಗಿ ಅರ್ಪಿಸುವ ನೀರಿನಲ್ಲಿರಲಿ ಈ 5 ವಸ್ತುಗಳು
ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ, ನಿತ್ಯ ಸೂರ್ಯದಯದ ಸಮಯದಲ್ಲಿ ಸೂರ್ಯದೇವನಿಗೆ ಅರ್ಘ್ಯವನ್ನು ಎಂದರೆ ನೀರನ್ನು ಅರ್ಪಿಸುವ ಸಂಪ್ರದಾಯವಿದೆ. ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವಾಗ ನೀರಿನಲ್ಲಿ ಈ ಐದು ವಸ್ತುಗಳಿದ್ದರೆ ತುಂಬಾ ಒಳಿತು ಎಂದು ಹೇಳಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯನಿಗೆ ಅರ್ಘ್ಯ ಅರ್ಪಿಸುವ ನೀರಿನಲ್ಲಿ ಕೆಂಪು ಪುಷ್ಪ ಇದ್ದರೆ ತುಂಬಾ ಶುಭ ಎಂದು ನಂಬಲಾಗಿದೆ. ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ದಾಸವಾಳ, ಇಲ್ಲವೇ ಯಾವುದೇ ಕೆಂಪು ಬಣ್ಣದ ಹೊವನ್ನು ಹಾಕಿ ನೀರು ಅರ್ಪಿಸಿದರೆ ನಿಮ್ಮ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಹಿಂದೂ ಧರ್ಮದಲ್ಲಿ ಪ್ರತಿ ಪೂಜೆಯಲ್ಲಿ ಅಕ್ಷತೆ ರೂಪದಲ್ಲಿ ಬಳಸಲಾಗುವ ಅಕ್ಕಿಯನ್ನು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯ ಎಂದು ನಂಬಲಾಗಿದೆ. ನೀವು ಸೂರ್ಯನಿಗೆ ಅರ್ಪಿಸುವ ಅರ್ಘ್ಯದಲ್ಲಿ ಅಕ್ಷತೆಯನ್ನು ಹಾಕುವುದು ತುಂಬಾ ಮಂಗಳಕರ ಫಲಗಳನ್ನು ನೀಡುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೆಣ್ಣಿನ ಮುತ್ತೈದೆ ತನವನ್ನು ಪ್ರತಿಬಿಂಬಿಸುವ ಕುಂಕುಮವು ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಳಪಡಿಸುವ ಶಕ್ತಿಯನ್ನು ಹೊಂದಿದೆ. ಹಾಗಾಗಿ, ಸೂರ್ಯನಿಗೆ ಅರ್ಘ್ಯವಾಗಿ ಅರ್ಪಿಸುವ ನೀರಿನಲ್ಲಿ ಕುಂಕುಮವನ್ನು ಬೇರೆಸಬೇಕು ಎಂದು ಹೇಳಲಾಗುತ್ತದೆ.
ಅರಿಶಿನವಿಲ್ಲದೆ ಯಾವುದೇ ಪೂಜೆ ಸಂಪೂರ್ಣವಾಗುವುದಿಲ್ಲ. ಇದಲ್ಲದೆ, ಅರಿಶಿನ ಆರೋಗ್ಯ ವರ್ಧಕವೂ ಹೌದು. ಇಂತಹ ಅರಿಶಿನವನ್ನು ಸೂರ್ಯದೇವನಿಗೆ ಅರ್ಪಿಸುವ ನೀರಿನಲ್ಲಿ ಬೆರೆಸುವುದರಿಂದ ನಿಮ್ಮ ಕೆಲಸ, ಕಾರ್ಯಗಳಲ್ಲಿ ಉಂಟಾಗಿರುವ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುವುದು.
ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವಾಗ ನೀರಿನಲ್ಲಿ ಸಕ್ಕರೆ ಮಿಶ್ರಮ್ನ ಮಾಡುವುದರಿಂದ ಸೂರ್ಯದೇವನ ಕೃಪೆಗೆ ಪಾತ್ರರಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದರಿಂದ ಸೂರ್ಯ ದೋಷವು ನಿವಾರಣೆ ಆಗುತ್ತದೆ ಎಂತಲೂ ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.