ಬೆಳಿಗ್ಗೆ ಮೊಸರಿನೊಂದಿಗೆ ಈ ವಸ್ತು ಬೆರೆಸಿ ತಿನ್ನಿ, ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಆಗುತ್ತದೆ !ಈಗಲೇ ಟ್ರೈ ಮಾಡಿ
ಮಧುಮೇಹವನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಸಂಪೂರ್ಣವಾಗಿ ನಿಯಂತ್ರಿಸುವುದು ಖಂಡಿತಾ ಸಾಧ್ಯ.ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳು ದೇಹದಲ್ಲಿ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಈ ಕಾರಣದಿಂದಲೇ ಮಧುಮೇಹ ರೋಗಿಗಳು ದೀರ್ಘಕಾಲ ಔಷಧಗಳನ್ನು ಸೇವಿಸಬೇಕಾಗುತ್ತದೆ.
ಕೆಲವೊಮ್ಮೆ ಔಷಧಗಳನ್ನು ಸೇವಿಸಿದರೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುವುದಿಲ್ಲ. ಆಗ ಆಹಾರ ಕ್ರಮದಲ್ಲಿ ವಿಶೇಷ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಬೆಳಿಗ್ಗೆ ಕಡಿಮೆ ಕೊಬ್ಬಿನ ಮೊಸರು ಜೊತೆಗೆ ಕೆಲವು ಪದಾರ್ಥಗಳನ್ನು ಸೇವಿಸಿದರೆ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇವುಗಳಲ್ಲಿ ಯಾವುದಾದರೂ ಒಂದನ್ನು ಕೂಡಾ ಪ್ರಯತ್ನಿಸಬಹುದು.
ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವ ರೋಗಿಗಳು ತಮ್ಮ ಆಹಾರದಲ್ಲಿ ಮೊಸರಿನೊಂದಿಗೆ ಬೇಯಿಸಿದ ಕಡಲೆಕಾಳನ್ನು ಸೇವಿಸಬಹುದು.ಒಂದು ಬಟ್ಟಲು ಬೇಯಿಸಿದ ಕಡಲೆಕಾಳನ್ನು ತೆಗೆದುಕೊಂಡು ಅದಕ್ಕೆ ಕಡಿಮೆ ಕೊಬ್ಬಿನ ಮೊಸರನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ಕರಿಮೆಣಸನ್ನು ಸೇರಿಸಿ ಮತ್ತು ಬೆಳಿಗ್ಗೆ ಉಪಹಾರವಾಗಿ ಸೇವಿಸಬಹುದು.
ಒಂದರಿಂದ ಎರಡು ಟೀಚಮಚ ಇಸಾಬ್ಗೋಲ್ ಅನ್ನು ಬೆಳಿಗ್ಗೆ ಕಡಿಮೆ ಕೊಬ್ಬಿನ ಮೊಸರಿಗೆ ಬೆರೆಸಿ ಸೇವಿಸಬೇಕು. ಇದು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬೆಳಗ್ಗೆ ನಾವು ಸೇವಿಸುವ ಆಹಾರ ಕೂಡಾ ರಕ್ತದ ಸಕ್ಕರೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ, ಹಸಿ ತರಕಾರಿಗಳಾದ ಸೌತೆಕಾಯಿ, ಟೊಮೆಟೊ, ಸೌತೆಕಾಯಿ ಮತ್ತು ಈರುಳ್ಳಿ ಇತ್ಯಾದಿಗಳನ್ನು ಮೊಸರಿನೊಂದಿಗೆ ತೆಗೆದುಕೊಳ್ಳಬಹುದು.
ಮಧುಮೇಹ ರೋಗಿಗಳು ಬೆಳಿಗ್ಗೆ ಮೊಸರಿನೊಂದಿಗೆ ದಾಳಿಂಬೆಯನ್ನು ಸೇವಿಸಬಹುದು.ಇದು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)